ವಿಪಕ್ಷ ನಾಯಕಿ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರ ಅವಹೇಳನಕಾರಿ ಟೀಕೆ: ಕ್ಷಮೆ ಕೋರಿದ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್

ವಿಪಕ್ಷ ನಾಯಕಿ ವಿರುದ್ಧದ ಕೀಳುಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

Published: 06th January 2021 03:14 PM  |   Last Updated: 06th January 2021 04:29 PM   |  A+A-


Uttarakhand CM Trivendra Singh Rawat

ಉತ್ತರಾಖಂಡ ಸಿಎಂ ತ್ರಿವೇಂದ್ರ ರಾವತ್

Posted By : Srinivasamurthy VN
Source : The New Indian Express

ಡೆಹ್ರಾಡೂನ್: ವಿಪಕ್ಷ ನಾಯಕಿ ವಿರುದ್ಧದ ಕೀಳುಮಟ್ಟದ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

ಪ್ರತಿಪಕ್ಷದ ನಾಯಕಿ ಇಂದಿರಾ ಹೃದಯೇಶ್ ಅವರ ಬಗ್ಗೆ ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮೂಲಕ ತ್ರಿವೇಂದ್ರ ಸಿಂಗ್ ರಾವತ್ ಕ್ಷಮೆ ಕೋರಿದ್ದಾರೆ.

ಬುಧವಾರ ಮುಂಜಾನೆ 1 ಗಂಟೆ ಸುಮಾರಿಗೆ ರಾವತ್ ಅವರು ಟ್ವೀಟ್ ಮಾಡಿದ್ದು, 'ಹೃದಯೇಶ್ ಅವರ ವಿರುದ್ಧದ ಟೀಕೆಗಳ ಬಗ್ಗೆ ಕೇಳಲು ತುಂಬಾ ಬೇಸರವಾಗುತ್ತದೆ. ಹೀಗಾಗಿ ನಾನು ವೈಯಕ್ತಿಕವಾಗಿ ಅವರ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ  ಭಗತ್ ಅವರು ಮಂಗಳವಾರ 'ಬುದ್ಧಿಯಾ' (ವೃದ್ಧೆ) ಮತ್ತು 'ದೂಬ್ತಾ ಜಹಾಜ್' (ಮುಳುಗುವ ಹಡಗು) ಎಂದು ಟೀಸಿದ್ದರು. 'ಮುದುಕಿ? ಮುಳುಗುವ ಹಡಗಿನೊಂದಿಗೆ ಏನು ಮಾಡಲು ಬಯಸುತ್ತೀರಿ?, ಎಂದು ಬಿಜೆಪಿ ಅಧ್ಯಕ್ಷರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೃದಯೇಶ್, ಬಿಜೆಪಿ ರಾಜ್ಯಾಧ್ಯಕ್ಷರು ಬಳಸಿರುವ ಕೀಳುಮಟ್ಟದ ಭಾಷೆ ನೋವು ತಂದಿದೆ. ಆಡಳಿತ ಪಕ್ಷದ ರಾಷ್ಟ್ರೀಯ ನಾಯಕತ್ವವು ಈ ಘಟನೆ ಕುರಿತು ಅರಿಯಬೇಕು ಎಂದು ಹೇಳಿದ್ದಾರೆ. 

ಅಂತೆಯೇ 'ಇಂತಹ ಭಾಷೆ ಮಾತೃತ್ವಕ್ಕೆ ಮಾಡಿದ ಅವಮಾನವಾಗಿದ್ದು, ನಮ್ಮ ಕಣಿವೆಗಳ ನಾಡಿನ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಗಮನಿಸಬೇಕು ಮತ್ತು ಅವರಿಂದ ವಿವರಣೆಯನ್ನು ಪಡೆಯಬೇಕೆಂದು ನಾನು ಕೋರುತ್ತೇನೆ. ಬೇಟಿ ಬಚಾವೊ, ಬೇಟಿ ಪಡಾವೊ ಎಂಬ ಘೋಷಣೆಯನ್ನು ಎತ್ತುತ್ತಿರುವ ಈ ಜನರು ತಮ್ಮ ಭಾಷೆಯ ಬಗ್ಗೆ ಕನಿಷ್ಠ ಜಾಗರೂಕರಾಗಿರಬೇಕು ಎಂದು ಹೃದಯೇಶ್ ಹೇಳಿದ್ದರು. 

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp