ಧಾರ್ಮಿಕ ಹಕ್ಕು ಜೀವನದ ಹಕ್ಕಿಗಿಂತ ದೊಡ್ಡದೇನಲ್ಲ: ಮದ್ರಾಸ್ ಹೈಕೋರ್ಟ್

ಕೋವಿಡ್-19 ನಿಯಮಗಳಲ್ಲಿ ರಾಜಿ ಮಾಡಿಕೊಳ್ಳದೇ ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಸಾಧ್ಯತೆಗಳನ್ನು ಚಿಂತಿಸಿ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಹೇಳಿದೆ. 

Published: 07th January 2021 07:36 PM  |   Last Updated: 07th January 2021 07:40 PM   |  A+A-


Right to religion not higher than right to life: Madras High Court

ಧಾರ್ಮಿಕ ಹಕ್ಕು ಜೀವನದ ಹಕ್ಕಿಗಿಂತಲೂ ದೊಡ್ಡದಲ್ಲ: ಮದ್ರಾಸ್ ಹೈಕೋರ್ಟ್

Posted By : Srinivas Rao BV
Source : Online Desk

ಚೆನ್ನೈ: ಕೋವಿಡ್-19 ನಿಯಮಗಳಲ್ಲಿ ರಾಜಿ ಮಾಡಿಕೊಳ್ಳದೇ ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಸಾಧ್ಯತೆಗಳನ್ನು ಚಿಂತಿಸಿ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಹೇಳಿದೆ. 

ಧಾರ್ಮಿಕ ಹಕ್ಕುಗಳು ಜೀವನದ ಹಕ್ಕಿಗಿಂತಲೂ ದೊಡ್ಡದಲ್ಲ ಎಂದು ಇದೇ ವೇಳೆ ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಧಾರ್ಮಿಕ ಹಕ್ಕುಗಳು ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸುವುದಾಗಿದೆ. ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಅದಕ್ಕೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮದ್ರಾಸ್ ಕೋರ್ಟ್ ಹೇಳಿದ್ದಾರೆ. 

ಸಿಜೆ ನ್ಯಾ. ಬ್ಯಾನರ್ಜಿ ಹಾಗೂ ನ್ಯಾ. ಸೇಂತಿಲ್ ಕುಮಾರ್ ಅವರಿದ್ದ ಪೀಠ ತಿರುಚಿರಪಳ್ಳಿ ಜಿಲ್ಲೆಯಲ್ಲಿರುವ ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್-19 ನಿಯಮಗಳು ಸಾರ್ವಜನಿಕ ಆರೋಗ್ಯಕ್ಕೆ ಅನುಗುಣವಾಗಿ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ರಂಗರಾಜ ನರಸಿಂಹನ್  ಶ್ರೀರಂಗಂ ದೇವಾಲಯದಲ್ಲಿ ಹಬ್ಬಗಳನ್ನು ಹಾಗೂ ಧಾರ್ಮಿಕ ಪ್ರಕ್ರಿಯೆಗಳನ್ನು ಎಂದಿನಂತೆ ನಡೆಸುವುದಕ್ಕೆ ಧಾರ್ಮಿಕ ದತ್ತಿ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. 

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ದುರ್ಗಾ ಪೂಜಾ ಹಬ್ಬದಲ್ಲಿ ಜನಸಂದಣಿಯನ್ನು ನಿಯಂತ್ರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿದ್ದನ್ನು ಉಲ್ಲೇಖಿಸಿದೆ. 

ದೇವಾಲಯ ವ್ಯವಸ್ಥೆಯನ್ನು ಪ್ರತಿನಿಧಿಸಿ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಸತೀಶ್ ಪರಾಸರನ್ ಕೆಲವು ಹಬ್ಬಗಳನ್ನು ಪ್ಯಾಂಡಮಿಕ್ ಅವಧಿಯಲ್ಲಿ ನಡೆಸಲಾಗುತ್ತದೆ. ಆದರೆ ಬೇರೆ ಬೇರೆ ದಿನಾಂಕಗಳಲ್ಲಿ ನಡೆಸಲಾಗುತ್ತದೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ. ವಾದವನ್ನು ಆಲಿಸಿದ ಕೋರ್ಟ್ ಪ್ಯಾಂಡಮಿಕ್ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಆಗದಂತೆ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಧಾರ್ಮಿಕ ಮುಖಂಡರ ಅಭಿಪ್ರಾಯ ಕೇಳಿ 6 ವಾರಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp