ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ನಡುವೆ ಪ್ರಪ್ರಥಮ ತಡೆರಹಿತ ವಿಮಾನಯಾನ ನೇತೃತ್ವ ವಹಿಸಿದ ಆಲ್-ವುಮೆನ್ ಏರ್ ಇಂಡಿಯಾ ಪೈಲಟ್ ಟೀಂ

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಹಾರಾಟ ಪ್ರಾರಂಭಿಸಿದ್ದು ವಿಮಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ವಿಶೇಷವೆಂದರೆ ಇಂತಹಾ ಸುದೀರ್ಘ ಪ್ರಯಾಣದ ವಿಮಾನವನ್ನು  ಸಂಪೂರ್ಣ ಮಹಿಳಾ ಪೈಲೆಟ್​ಗಳೇ ನಿರ್ವಹಿಸುತ್ತಿದ್ದಾರೆ!

Published: 10th January 2021 07:23 PM  |   Last Updated: 10th January 2021 07:23 PM   |  A+A-


Posted By : Raghavendra Adiga
Source : Online Desk

ಬೆಂಗಳೂರು: ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಹಾರಾಟ ಪ್ರಾರಂಭಿಸಿದ್ದು ವಿಮಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ವಿಶೇಷವೆಂದರೆ ಇಂತಹಾ ಸುದೀರ್ಘ ಪ್ರಯಾಣದ ವಿಮಾನವನ್ನು  ಸಂಪೂರ್ಣ ಮಹಿಳಾ ಪೈಲೆಟ್​ಗಳೇ ನಿರ್ವಹಿಸುತ್ತಿದ್ದಾರೆ!

ಸುಮಾರು 14,000 ಕಿಲೋಮೀಟರ್ ದೂರದ ಈ ಪ್ರಯಾಣಕ್ಕೆ ಏರಿ ಇಂಡಿಯಾದ  AI 176 ಸಿದ್ದವಾಗಿದ್ದು ಈ ವಿಮಾನ ಸೇವೆ ಪ್ರತಿ ಶನಿವಾರ ಹಾಗೂ ಮಂಗಳವಾರ ಲಭ್ಯವಿರಲಿದೆ. ಬೋಯೆಂಗ್ 777-200LR VT ALG ಒಟ್ಟೂ 238 ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದುಪ್ರಥಮ ದರ್ಜೆಯಲ್ಲಿ 8, ಬ್ಯುಸಿನೆಸ್ ದರ್ಜೆಯ 35, ಎಕನಮಿ ದರ್ಜೆಯ 195  ಆಸನಗಳಿದೆ.

ಈ ವಿಮಾನವನ್ನು ಸಂಪೂರ್ಣ ಮಹಿಳಾ ಪೈಕೆಟ್ ತಂಡ ನಿರ್ವಹಿಸುತ್ತಿದ್ದು ಕ್ಯಾಪ್ಟನ್ ಜೋಯಾ ಅಗರ್​ವಾಲ್ (P1), ಕ್ಯಾಪ್ಟನ್ ಪಾಪಗರಿ ತನ್ಮಯಿ (P1), ಕ್ಯಾಪ್ಟನ್ ಆಕಾಂಶಾ ಸೋನಾವರೆ (P2) ಹಾಗೂ ಕ್ಯಾಪ್ಟನ್ ಶಿವಾನಿ ಮನ್ಹಾಸ್ (P2) ಈ ತಂಡದ ಸದಸ್ಯರಾಗಿದ್ದಾರೆ.

 

 

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಹಿಳಾ ಪೈಲೆಟ್ ತಂಡಕ್ಕೆ ಶುಭಕೋರಿದ್ದಾರೆ. ಜಗತ್ತಿನಲ್ಲಿ ಭಾರತೀಯ ಮಹಿಳೆಯರು ಅತಿ ಎತ್ತರದ ಸ್ಥಾನದಲ್ಲಿದ್ದಾರೆಂದು ಏರ್​ ಇಂಡಿಯಾ ಟ್ವೀಟ್  ಮಾಡಿ ಮೆಚ್ಚುಗೆ ಸೂಚಿಸಿದೆ. 

 

 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp