ಅಲೀಘರ್ ಮುಸ್ಲಿಂ ವಿವಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ!

ಅಲೀಘರ್ ಮುಸ್ಲಿಂ ವಿವಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

Published: 10th January 2021 03:45 PM  |   Last Updated: 10th January 2021 03:45 PM   |  A+A-


Trinamool Congress member shot dead in West Bengal

ಸಾಂದರ್ಭಿಕ ಚಿತ್ರ

Posted By : Srinivas Rao BV
Source : IANS

ಅಲೀಘರ್: ಅಲೀಘರ್ ಮುಸ್ಲಿಂ ವಿವಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಅತೀಫ್ ಸ್ನೇಹಿತನ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆತನ ಸ್ನೇಹಿತ ಝೈದ್ ದ್ವಿಚಕ್ರವಾಹನದ ಜೊತೆಗೆ ಮನೆಗೆ ಪರಾರಿಯಾಗಿದ್ದಾನೆ

ಘಟನೆಯನ್ನು ಖಂಡಿಸಿ ಎಎಂಯು ವಿದ್ಯಾರ್ಥಿಗಳು ಜೆ.ಎನ್ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸರ್ಕಲ್ ಆಫೀಸರ್ ಅನಿಲ್ ಸಮನಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮೃತ ಅತೀಫ್ 2018 ರಲ್ಲಿ ಜಮಲ್ಪುರ್ ಪ್ರದೇಶದಲ್ಲಿ ನಡೆದಿದ್ದ ಶಾಬಾಜ್ ಎಂಬ ವ್ಯಕ್ತಿಯ ಹತ್ಯೆಯಲ್ಲಿ ಪಿತೂರಿ ನಡೆಸಿದ್ದ ಆರೋಪ ಎದುರಿಸುತ್ತಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp