ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು; ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದ ಭಾರತ್ ಬಯೋಟೆಕ್

ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಪ್ರತಿಕ್ರಿಯಿಸಿದ್ದು, ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ಹೇಳಿದೆ.

Published: 10th January 2021 08:17 AM  |   Last Updated: 10th January 2021 08:17 AM   |  A+A-


Bharat Biotech's Covaxin vaccine

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಶಿಫಾರಸು

Posted By : Srinivasamurthy VN
Source : PTI

ನವದೆಹಲಿ: ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಪ್ರತಿಕ್ರಿಯಿಸಿದ್ದು, ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ಹೇಳಿದೆ.

ಪ್ರಾಥಮಿಕ ಪರಿಶೀಲನೆಯಲ್ಲಿ ಭೋಪಾಲ್ ವ್ಯಕ್ತಿ ಲಸಿಕೆಯಿಂದ ಸಾವನ್ನಪ್ಪಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಭಾರತ್ ಬಯೋಟೆಕ್ ಇಂಟರ್‌ ನ್ಯಾಶನಲ್ ಲಿಮಿಟೇಡ್ ತಿಳಿಸಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ್ ಬಯೋಟೆಕ್, 'ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಶಂಕಿತ ವಿಷದ ಪರಿಣಾಮವಾಗಿ ಹೃದಯ ಉಸಿರಾಟದ ವೈಫಲ್ಯವೇ ಸಾವಿಗೆ ಕಾರಣವಾಗಿದೆ. ಸ್ವಯಂ ಸೇವಕನು ಅಧ್ಯಯನದಲ್ಲಿ ಒಳಗೊಂಡಿರುವ ಅಧ್ಯಯನ ಲಸಿಕೆ ಅಥವಾ ಪ್ಲಸೀಬೊ ಪಡೆದಿದ್ದಾರೆ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೂರನೇ ಹಂತದ ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡ 25,800 ಸ್ವಯಂ ಸೇವಕರಲ್ಲಿ ಮರಾವಿ ಕೂಡ ಒಬ್ಬರು. ಪ್ರಯೋಗದಲ್ಲಿ 28 ದಿನಗಳ ಅವಧಿಯಲ್ಲಿ ಎರಡು ಡೋಸ್ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಅಂತೆಯೇ  "3ನೇ ಹಂತದ  ಪ್ರಯೋಗದ ಸಮಯದಲ್ಲಿ ಸ್ವಯಂಸೇವಕನು ಲಸಿಕೆ ದಾಖಲಾತಿಗೆ ಸಂಬಂಧಿಸಿದ ಒಳಬರುವ ಮತ್ತು ಹೊರಹೋಗುವ ಮಾನದಂಡಗಳನ್ನು ಪೂರೈಸಿದ್ದಾನೆ. ಅವನು ಮೊದಲ ಡೋಸ್ ಪಡೆದ 7 ದಿನಗಳ ಅವಧಿಯ ಎಲ್ಲ ಮೇಲ್ವಿಚಾರಣೆಯಲ್ಲಿ ಆತ ಆರೋಗ್ಯವಾಗಿದ್ದನೆಂದು ವರದಿಯಾಗಿದೆ. ಆಗ ಲಸಿಕೆ ಯಾವುದೇ ಪ್ರತಿಕೂಲ ಬೆಳವಣಿಗೆ ಕಂಡುಬಂದಿಲ್ಲ,”ಎಂದು ಹೈದರಾಬಾದ್ ಮೂಲದ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್‌ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಕಂಪನಿಯು ಈ ಹಿಂದೆ ಹೇಳಿದಂತೆ, “ರ್ಯಾಂಡಮ್,  ಡಬಲ್-ಬ್ಲೈಂಡ್, ಪ್ಲಸೀಬೊ-ನಿಯಂತ್ರಿತ.” ವಾಗಿರುತ್ತವೆ. ಡಬಲ್ ಬ್ಲೈಂಡ್ ಪ್ರಾಯೋಗಿಕ ಪ್ರಕ್ರಿಯೆಯನ್ನು ಸೂಚಿಸುತ್ತದೆ, ಅಲ್ಲಿ ಡೋಸ್ ಕಂಟೆಂಟ್ (ಪರೀಕ್ಷಾ ಲಸಿಕೆ ಅಥವಾ ಪ್ಲಸೀಬೊ) ವಿಷಯ ಸ್ವಯಂಸೇವಕನಿಗಾಗಲಿ ಅಥವಾ ನಿರ್ವಾಹಕರಿಗಾಗಲಿ ತಿಳಿಯುವುದಿಲ್ಲ.
 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp