ಶ್ರೀಲಂಕಾ ನೌಕಾಪಡೆಯಿಂದ ರಾಮೇಶ್ವರಂ ನ 9 ಮೀನುಗಾರರ ಬಂಧನ: ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ
ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶನಿವಾರ ರಾತ್ರಿ ಕಚ್ಚಾಹೀವು ಬಳಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
Published: 10th January 2021 02:06 PM | Last Updated: 10th January 2021 02:06 PM | A+A A-

ಸಾಂದರ್ಭಿಕ ಚಿತ್ರ
ರಾಮೇಶ್ವರಂ: ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಶನಿವಾರ ರಾತ್ರಿ ಕಚ್ಚಾಹೀವು ಬಳಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಈ ಬಂಧನವನ್ನು ಖಂಡಿಸಿ ಭಾನುವಾರ ಮಧ್ಯಾಹ್ನ ಮೀನುಗಾರರು ಅನಿರ್ಧಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ. ಯಾಂತ್ರಿಕೃತ ದೋಣಿಯ ಮಾಲೀಕರಾದ ಎ ಕಿರುಬಾಯಿ (37) ಎಸ್ ವಾಲನ್ ಕೌಶಿಕ್ (24), ಮೈಕಿಯಾಸ್ (30), ಎ ಕೆನ್ನಿಂಗ್ಸ್ಟನ್ (28), ಆರ್ ಸ್ಯಾಮ್ ಸ್ಟಿಲ್ಲರ್ (20), ಎ ನಿಜಾನ್ (30), ಬ್ರೈಟನ್ (20), ಆರ್ ಕಿಶೋರ್ (27) ಮತ್ತು ಮಾರಿ (45). ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಐಎಂಬಿಎಲ್ ಅನ್ನು ಅತಿಕ್ರಮಣ ಮಾಡಿಕೊಂಡು ಕಾಟ್ಚತೀವು ಬಳಿ ಮೀನುಗಾರಿಕೆ ನಡೆಸಿದ್ದಕ್ಕಾಗಿ ರಾಮೇಶ್ವರಂನ ಮೀನುಗಾರರನ್ನು ಬಂಧಿಸಲಾಗಿದೆ. ದೋಣಿ ಸಹ ವಶಪಡಿಸಿಕೊಳ್ಳಲಾಗಿದೆ. ಶನಿವಾರ ರಾತ್ರಿ ನಡೆದ ಒಂದು ಪ್ರತ್ಯೇಕ ಘಟನೆಯಲ್ಲಿ, ಕಟ್ಚತೀವು ಬಳಿ ಸುಮಾರು 20 ಯಾಂತ್ರಿಕೃತ ದೋಣಿಗಳಲ್ಲಿ ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರಿಕಾ ಬಲೆಗಳನ್ನು ಬೀಳಿಸಿದ್ದಾರೆಂದು ವರದಿಯಾಗಿದೆ.