ಚಿಕನ್, ಡ್ರೈ ಪ್ರೂಟ್ಸ್ ಸೇವಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಂದ ಹಕ್ಕಿ ಜ್ವರ ಹರಡುವ ಶಂಕೆ: ಬಿಜೆಪಿ ಶಾಸಕ

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ವಾಗ್ದಾಳಿ ನಡೆಸಿರುವ ರಾಜಸ್ತಾನದ ಬಿಜೆಪಿ ಶಾಸಕ ಮದನ್ ದಿಲ್ವಾರ್, ಪ್ರತಿಭಟನಾ ಸ್ಥಳಗಳಲ್ಲಿ ಚಿಕನ್ ಸೇವಿಸುವ ಮೂಲಕ ಹಕ್ಕಿ ಜ್ವರ ಹರಡುತ್ತಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

Published: 10th January 2021 11:21 AM  |   Last Updated: 11th January 2021 01:26 PM   |  A+A-


Farmesr_Bjp_Mla1

ಪ್ರತಿಭಟನಾನಿರತ ರೈತರು, ಬಿಜೆಪಿ ಶಾಸಕ

Posted By : Nagaraja AB
Source : ANI

ಜೈಪುರ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ವಾಗ್ದಾಳಿ ನಡೆಸಿರುವ ರಾಜಸ್ತಾನದ ಬಿಜೆಪಿ ಶಾಸಕ ಮದನ್ ದಿಲ್ವಾರ್, ಪ್ರತಿಭಟನಾ ಸ್ಥಳಗಳಲ್ಲಿ ಚಿಕನ್ ಸೇವಿಸುವ ಮೂಲಕ ಹಕ್ಕಿ ಜ್ವರ ಹರಡುತ್ತಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಸೋ ಕಾಲ್ಡ್ ರೈತರಿಗೆ ದೇಶದ ಬಗ್ಗೆ ಆತಂಕವಿಲ್ಲ, ಸವಿಯಾದ ಭಕ್ಷ್ಯಗಳ ಹೊರತಾಗಿ  ಲಕ್ಸುರಿಯಾಗಿ ಪಿಕ್ ನಿಕ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲ ಸೋ ಕಾಲ್ಡ್ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಸೋ ಕಾಲ್ಡ್ ರೈತರು ಯಾವುದೇ ಚಳವಳಿಯಲ್ಲಿ ತೊಡಗಿಸಿಕೊಂಡಿಲ್ಲ ಆದರೆ, ಚಿಕನ್ ಬಿರಿಯಾನಿ, ಡ್ರೈ ಪ್ರೂಟ್ಸ್ ಜಡಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿ ಜ್ವರ ಹರಡುವ ಶಂಕೆ ಇರುವುದಾಗಿ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾನಿರತ ರೈತರಲ್ಲಿ ಕೆಲವರು ಉಗ್ರರು, ದರೋಡೆಕೋರರು, ಕಳ್ಳ ಕಾಕರು, ರೈತ ವಿರೋಧಿಗಳಿರುವ ಸಾಧ್ಯತೆಯಿದೆ. ಇವರೆಲ್ಲರೂ ದೇಶ ಹಾಳಾಗುವುದನ್ನು ಬಯಸಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. 

ಒಂದು ವೇಳೆ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸದಿದ್ದರೆ ಹಕ್ಕಿಜ್ವರ ದೇಶದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಲಿದೆ ಎಂದು ದಿಲ್ವಾರ್ ಆತಂಕ ವ್ಯಕ್ತಪಡಿಸಿದ್ದಾರೆ.

 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp