ಉತ್ತರ ಪ್ರದೇಶದ ಆಸ್ಪತ್ರೆಗಳನ್ನು ಟೀಕಿಸಿದ್ದ ಎಎಪಿ ಶಾಸಕ ಸೋಮನಾಥ ಭಾರ್ತಿ ಬಂಧನ
ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಮ್ ಅದ್ಮಿ ಪಕ್ಷದ(ಎಎಪಿ) ಶಾಸಕ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ ಅಮೆಥಿಯಲ್ಲಿ ಬಂಧಿಸಲಾಗಿದೆ.
Published: 11th January 2021 05:09 PM | Last Updated: 11th January 2021 07:37 PM | A+A A-

ಎಎಪಿ ಶಾಸಕ ಸೋಮನಾಥ ಭಾರ್ತಿ
ಲಖನೌ: ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಮ್ ಅದ್ಮಿ ಪಕ್ಷದ(ಎಎಪಿ) ಶಾಸಕ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ ಅಮೆಥಿಯಲ್ಲಿ ಬಂಧಿಸಲಾಗಿದೆ.
ಸಿಆರ್ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಆಪ್ ಶಾಕರನ್ನು ಬಂಧಿಸಲಾಗಿದೆ. ಇದಕ್ಕು ಮುನ್ನ ಸೋಮನಾಥ್ ಭಾರ್ತಿ ಅವರು ರಾಯಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದಾಗ ಅವರ ಮೇಲೆ ಕಪ್ಪು ಶಾಯಿ ಎರಚಲಾಗಿತ್ತು. ಶಾಯಿ ಎರಚಿದ ವ್ಯಕ್ತಿ ತಪ್ಪಿಸಿಕೊಂಡಿದ್ದಾರೆ. ಆದರೆ ಘಟನೆಯ ನಂತರ ಅಮೆಥಿಗೆ ಭೇಟಿ ನೀಡಿದ ಭಾರತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆಥಿ ಮತ್ತು ರಾಯಬರೇಲಿ ಪ್ರವಾಸದಲ್ಲಿರುವ ಸೋಮನಾಥ್ ಭಾರ್ತಿ ಅವರು, ಉತ್ತರ ಪ್ರದೇಶ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರನ್ನು ಇಂದು ಅಮೆಥಿ ಅತಿಥಿ ಗೃಹದಲ್ಲಿ ಬಂಧಿಸಲಾಗಿದೆ.
AAP MLA Somnatb Bharti in conversation with cops after ink incident in Raebareli @NewIndianXpress @TheMornStandard pic.twitter.com/4gBc5pxPo5
— Namita_TNIE (@Namita_TNIE) January 11, 2021
ನಂತರ ಮಾಧ್ಯಮ ವ್ಯಕ್ತಿಗಳೊಂದಿಗೆ ಮಾತನಾಡಿದ ಭಾರ್ತಿ ಅವರು, ಪೊಲೀಸರ ಸಮ್ಮುಖದಲ್ಲೇ ನನ್ನ ಮೇಲೆ ಮಸಿ ಎರಚಲಾಗಿದೆ. ಇದು "ಬಿಜೆಪಿ ಕಾರ್ಯಕರ್ತರ ಕೈವಾಡ" ಎಂದು ಆರೋಪಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದರು.