ಕಲ್ಲಿದ್ದಲು ಗಣಿಗಾರಿಕೆ: ಆನ್ ಲೈನ್ ಮೂಲಕ ಅನುಮತಿ ಪಡೆಯುವ ಏಕಗವಾಕ್ಷಿ ಯೋಜನೆಗೆ ಅಮಿತ್ ಶಾ ಚಾಲನೆ

ಕಲ್ಲಿದ್ದಲು ಗಣಿಗಾರಿಕೆಗೆ  ಆನ್ ಲೈನ್  ವೇದಿಕೆಯ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದು ಚಾಲನೆ ನೀಡಿದರು.

Published: 11th January 2021 08:37 PM  |   Last Updated: 11th January 2021 08:41 PM   |  A+A-


Amitsha1

ಅಮಿತ್ ಶಾ

Posted By : Nagaraja AB
Source : UNI

ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್  ವೇದಿಕೆಯ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಈ ಏಕ ಗವಾಕ್ಷಿ ಯೋಜನೆ ಅದರ ಭಾಗವಾಗಿದೆ ಎಂದು ತಿಳಿಸಿದರು.

ಕಲ್ಲಿದ್ದಲು ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಆಗುತ್ತಿರಲಿಲ್ಲ, ಮೋದಿ ಅವರ ಸರ್ಕಾರ ಆಡಳಿತಾತ್ಮಕ ಸುಧಾರಣೆಗಳಿಂದ ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತಂದಿದ್ದಾರೆ. ಈಗ ಕ್ಷೇತ್ರದಲ್ಲಿನ ಸಂಕೀರ್ಣತೆ ನಿವಾರಣೆ ಆಗಿದ್ದು, ಸುಗಮ ವಹಿವಾಟು ನಡೆಯುತ್ತಿದೆ ಎಂದರು.

ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗೆ ಕಲ್ಲಿದ್ದಲು ಕ್ಷೇತ್ರ ಅತಿ ದೊಡ್ಡ ಪಾಲು ನೀಡಲಿದೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಹೊಸಬರಿಗೂ ಅವಕಾಶ ಲಭಿಸುತ್ತಿದೆ. ಕಲ್ಲಿದ್ದಲು ಕ್ಷೇತ್ರದಲ್ಲಿ ಸಮಾನತೆ ಮೂಡುತ್ತಿದೆ ಎಂದು ಹೇಳಿದರು.

ದೇಶದ ಎಲ್ಲ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧ್ಯವಾಗದ ಹೊರತು ಆತ್ಮನಿರ್ಭರ ಭಾರತ ನಿರ್ಮಾಣ ಅಸಾಧ್ಯ, ಪ್ರಧಾನಿ ಮೋದಿ ಅವರು ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುತ್ತಿದ್ದು, ಇಂದು ಕಲ್ಲಿದ್ದಲು ಕ್ಷೇತ್ರವೂ ಆತ್ಮನಿರ್ಭರತೆಯತ್ತ ಸಾಗಿದೆ ಎಂದರು.

ಇದಕ್ಕೂ ಮುನ್ನ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ, ಭಾರತ 2020ರಲ್ಲಿ 729 ದಶಲಕ್ಷ ಟನ್  ದಾಖಲೆಯ  ಉತ್ಪಾದನೆಯೊಂದಿಗೆ ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದನಾ ರಾಷ್ಟ್ರವಾಗಿದೆ ಎಂದು ತಿಳಿಸಿದರು.

ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ದಾಸ್ತಾನು ಹಿಂದೆಂದಿಗಿಂತ ಹೆಚ್ಚಾಗಿದ್ದು, 30 ದಿನಗಳ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟಿದೆ. ಇದರಿಂದಾಗಿ ದೇಶದಲ್ಲಿ ಎಲ್ಲಿಯೂ ಕಲ್ಲಿದ್ದಲಿನ ಅಭಾವ ಇಲ್ಲ ಎಂದು ಹೇಳಿದರು.                
 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp