ನಾಲ್ಕು ಮಹಿಳಾ ಪೈಲಟ್ ಗಳ ಸಾರರ್ಥ್ಯದ ಏರ್ ಇಂಡಿಯಾ ವಿಮಾನ ಸಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಆಗಮನ!

ಐತಿಹಾಸಿಕ ನಡೆಯೊಂದರಲ್ಲಿ, ಏರ್ ಇಂಡಿಯಾದ ಅತಿ ದೀರ್ಘ ಹಾರಾಟದ ವಿಮಾನ ಎಲ್ಲಾ ಮಹಿಳಾ ಪೈಲಟ್ ತಂಡದೊಂದಿಗೆ ಸಾನ್ ಫ್ಲಾನ್ಸಿಸ್ಕೊದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ನಾರ್ತ್ ಪೋಲ್ ಮೂಲಕ 16 ಸಾವಿರ ಕಿಲೋ ಮೀಟರ್ ಹಾರಾಟ ನಡೆಸಿದೆ.

Published: 11th January 2021 10:02 AM  |   Last Updated: 11th January 2021 12:41 PM   |  A+A-


Members of the crew are Captain Zoya Aggarwal, Captain Papagari Thanmai, Captain Akansha Sonaware and Captain Shivani Manhas.

ಕ್ಯಾಪ್ಟನ್ ಜೋಯಾ ಅಗರ್ವಾಲ್, ಕ್ಯಾ.ಪಾಪಗರ್ ತನ್ಮಯಿ, ಕ್ಯಾ.ಆಕಾಂಶ ಸೊನವರೆ, ಮತ್ತು ಕ್ಯಾ.ಶಿವಾನಿ ಮನ್ಹಸ

Posted By : Sumana Upadhyaya
Source : ANI

ಬೆಂಗಳೂರು: ಐತಿಹಾಸಿಕ ನಡೆಯೊಂದರಲ್ಲಿ, ಏರ್ ಇಂಡಿಯಾದ ಅತಿ ದೀರ್ಘ ಹಾರಾಟದ ವಿಮಾನ ಎಲ್ಲಾ ಮಹಿಳಾ ಪೈಲಟ್ ತಂಡದೊಂದಿಗೆ ಸಾನ್ ಫ್ಲಾನ್ಸಿಸ್ಕೊದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ನಾರ್ತ್ ಪೋಲ್ ಮೂಲಕ 16 ಸಾವಿರ ಕಿಲೋ ಮೀಟರ್ ಹಾರಾಟ ನಡೆಸಿದೆ.

ನಾರ್ತ್ ಪೋಲ್ ಮೂಲಕ ಹಾರಾಟ ನಡೆಸಿ ಬಂದು ಇಂದು ಇತಿಹಾಸ ಸೃಷ್ಟಿಸಿದ್ದು ಮಾತ್ರವಲ್ಲದೆ ಅದರಲ್ಲಿದ್ದವರೆಲ್ಲರೂ ಮಹಿಳಾ ಪೈಟಲ್ ಗಳು. ಆ ವಿಮಾನ ಹಾರಾಟ ತಂಡದ ಭಾಗವಾಗಿದ್ದಕ್ಕೆ ನಮಗೆ ತೀವ್ರ ಸಂತಸವಿದೆ. ಈ ಮಾರ್ಗದಲ್ಲಿ ಹಾರಾಟ ನಡೆಸಿದ್ದರಿಂದ 10 ಟನ್ ಇಂಧನ ಉಳಿಕೆಯಾಗಿದೆ ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಸಂತಸ ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾದ ಸಾನ್ ಫ್ಲಾನ್ಸಿಸ್ಕೊ-ಬೆಂಗಳೂರು ವಿಮಾನವನ್ನು ಮೊದಲ ಬಾರಿಗೆ ಹಾರಾಟ ನಡೆಸಿದ ಶಿವಾನಿ ಮನ್ಹಾಸ್, ನನಗೆ ಇದೊಂದು ಹೊಸ ಉತ್ಸಾಹಭರಿತ ಅನುಭವವಾಗಿತ್ತು. ಇಲ್ಲಿಗೆ ಬಂದು ಮುಟ್ಟಲು ಸುಮಾರು 17 ಗಂಟೆ ಹಿಡಿಯಿತು ಎನ್ನುತ್ತಾರೆ.
ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಪ್ರತಿಕ್ರಿಯೆ ನೀಡಿ, ಏರ್ ಇಂಡಿಯಾದ ಮಹಿಳಾ ತಂಡ ಜಗತ್ತಿನ ಸುತ್ತ ಸುತ್ತುತ್ತಿದ್ದು, ನಮ್ಮ ನಾರಿ ಶಕ್ತಿ ಇತಿಹಾಸ ಸೃಷ್ಟಿಸಿದೆ ಎಂದಿದ್ದಾರೆ.

ಅಮೆರಿಕದ ಪೂರ್ವ ತೀರವಾದ ಸಾನ್ ಫ್ಲಾನ್ಸಿಸ್ಕೊದಿಂದ ದಕ್ಷಿಣ ಭಾರತಕ್ಕೆ ನೇರ ವಿಮಾನ ಹಾರಾಟ ನಡೆಸಿದ ಮೊದಲ ವಿಮಾನ ಇದಾಗಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp