ದುರಾದೃಷ್ಟವಾಗಿ ಬಂದ 'ಮಹಾ' ಅವಘಡ: 3 ಮಕ್ಕಳನ್ನು ಕಳೆದುಕೊಂಡಿದ್ದ ಪೋಷಕರ 4 ನೇ ಮಗುವೂ ಅಗ್ನಿ ಅನಾಹುತಕ್ಕೆ ಬಲಿ!

14 ವರ್ಷಗಳಿಂದ ಮಹಾರಾಷ್ಟ್ರದ ಆ ದಂಪತಿಗಳು 3 ಮಕ್ಕಳನ್ನು ಹುಟ್ಟಿದ ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದರು. ಇತ್ತೀಚೆಗೆ 4 ನೇ ಮಗು ಜನನವಾಗಿ ಭನರ್ಕರ್ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಘೋರ ವಿಧಿ ಆ ಮಗುವನ್ನೂ ಬಲಿ ಪಡೆದಿದೆ. 

Published: 11th January 2021 11:54 AM  |   Last Updated: 11th January 2021 12:43 PM   |  A+A-


newborn-2

ನವಜಾತ ಶಿಶು(ಸಾಂಕೇತಿಕ ಚಿತ್ರ)

Posted By : Srinivas Rao BV
Source : PTI

ಮುಂಬೈ: 14 ವರ್ಷಗಳಿಂದ ಮಹಾರಾಷ್ಟ್ರದ ಆ ದಂಪತಿಗಳು 3 ಮಕ್ಕಳನ್ನು ಹುಟ್ಟಿದ ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದರು. ಇತ್ತೀಚೆಗೆ 4 ನೇ ಮಗು ಜನನವಾಗಿ ಭನರ್ಕರ್ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಘೋರ ವಿಧಿ ಆ ಮಗುವನ್ನೂ ಬಲಿ ಪಡೆದಿದೆ. 

3 ಮಕ್ಕಳನ್ನು ಈ ವರೆಗೂ ಕಳೆದುಕೊಂಡಿದ್ದ ಭನರ್ಕರ್ ದಂಪತಿಗಳಿಗೆ ಭಾಂದರಾ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಸಹ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಜೀವ ಕಳೆದುಕೊಂಡಿದೆ. 

ಈ ಮಗುವಿನ ಜೊತೆಗೆ 9 ಶಿಶುಗಳು ಅಗ್ನಿ ಅನಾಹುತದಲ್ಲಿ ಪ್ರಾಣಕಳೆದುಕೊಂಡಿವೆ. ಹಿರ್ಕನ್ಯ ಭನಾರ್ಕರ್ (39) ಅವರ ಪತಿ ಹೀರಾಲಾಲ್ ಭನಾರ್ಕರ್ ಈ ಅನಾಹುತದ ಬಗ್ಗೆ ಮಾತನಡಿದ್ದು, ಯಾರಿಗೂ ಇಂತಹ ದುಸ್ಥಿತಿ ಬರಬಾರದು, ಮಕ್ಕಳು ಜೀವಿಸಿ, ಆಟವಾಡಬೇಕು ಎಂದು ಹೇಳಿದ್ದಾರೆ.

ಮಗುವನ್ನು ಕಳೆದುಕೊಂಡ ಅಘಾತದಲ್ಲಿರುವ ಮಹಿಳೆ ಹಿರ್ಕನ್ಯಾ ಮಾತನಾಡಲೂ ಆಗದ ಸ್ಥಿತಿಯಲ್ಲಿದ್ದಾರೆ. ದಂಪತಿಗಳು ಕಾರ್ಮಿಕರಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ಹಲವು ವರ್ಷಗಳ ನಂತರ ಜ.06 ರಂದು  ಹೆಣ್ಣುಮಗು ಜನಿಸಿತ್ತು. ಆದರೆ ಅವಧಿಗೂ ಮುನ್ನವೇ ಜನಿಸಿದ ಮಗುವಾಗಿದ್ದ ಕಾರಣ ನವಜಾತ ಶಿಶುಗಳ ವಿಶೇಷ ನಿಗಾ ಘಟಕ ( ಎಸ್ ಎನ್ ಸಿಯು) ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

ದಂಪತಿಯ ಮನೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದ ಕಾರಣ ಮಗು ಅವಧಿಗೂ ಮುನ್ನವೇ ಜನಿಸಿತ್ತು. ಈ ದಂಪತಿಯ ಮಗುವಷ್ಟೇ ಅಲ್ಲದೇ 9 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಪೋಷಕರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಸ್ಪತ್ರೆ ಹಾಗೂ ಆರೋಗ್ಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp