ತಮಿಳುನಾಡು: ಬಸ್ಸಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐದು ಪ್ರಯಾಣಿಕರು ದುರಂತ ಸಾವು
ಖಾಸಗಿ ಬಸ್ಸೊಂದು ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ , ಐದು ಪ್ರಯಾಣಿಕರು ವಿದ್ಯುದಾಘಾತದಿಂದ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆ ತಿರುವೈಯಾರ್ ಸಮೀಪ ವರಗೂರ್ ನಲ್ಲಿ ನಡೆದಿದೆ.
Published: 12th January 2021 07:10 PM | Last Updated: 12th January 2021 07:10 PM | A+A A-

ತಮಿಳುನಾಡಿನಲ್ಲಿ ಬಸ್ ದುರಂತ
ತಂಜಾವೂರ್: ಖಾಸಗಿ ಬಸ್ಸೊಂದು ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ , ಐದು ಪ್ರಯಾಣಿಕರು ವಿದ್ಯುದಾಘಾತದಿಂದ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರ್ ಜಿಲ್ಲೆ ತಿರುವೈಯಾರ್ ಸಮೀಪ ವರಗೂರ್ ನಲ್ಲಿ ನಡೆದಿದೆ.
50 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಗ್ರ್ಯಾಂಡ್ ಅನೈಕಟ್ನಿಂದ ತಂಜಾವೂರಿಗೆ ಬರುತ್ತಿತ್ತುಎಂದು ತಂಜಾವೂರು ಪೊಲೀಸ್ ವರಿಷ್ಠಾಧಿಕಾರಿ ದೇಶ್ ಮುಖ್ಶೇಖರ್ ಸಂಜಯ್ ಸುದ್ದಿಗಾರರಿಗೆ ತಿಳಿಸಿದರು.
ಲಾರಿಯನ್ನು ಚೇಸ್ ಮಾಡುವುದಕ್ಕೆ ಯತ್ನಿಸಿ ಬಸ್ನ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಹೈ ಟೆನ್ಷನ್ ವಿದ್ಯುತ್ ತಂತಿಗೆ ಬಸ್ ಅನ್ನು ತಗುಲಿಸಿದ್ದಾನೆ. ಸ್ಥಳದಲ್ಲಿಯೇ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದರೆ , 10 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇನ್ನಿಬ್ಬರು ಸಾವಿಗೀಡಾಗಿದ್ದಾರೆ. ಬದುಕುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೋಲೀಸ್ ತನಿಖೆ ಮುಂದುವರಿದಿದೆ