ಕೇಂದ್ರ ಬಜೆಟ್ ಪ್ರತಿಯನ್ನು ಮುದ್ರಿಸದಿರುವುದು ಅಗ್ಗದ ನಾಟಕೀಯ ವರ್ತನೆ: ಕಾಂಗ್ರೆಸ್ ಟೀಕೆ 

ಈ ಬಾರಿ ಕೇಂದ್ರ ಬಜೆಟ್ ಪ್ರತಿಯ ಅಚ್ಚು ಹಾಕಿಸದಿರುವುದು ನಾಟಕೀಯ ವರ್ತನೆ ಎಂದು ಕಾಂಗ್ರೆಸ್ ನ ಲೋಕಸಭಾ ಸದಸ್ಯ ಮನೀಶ್ ತಿವಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದಿದ್ದಾರೆ.

Published: 12th January 2021 01:28 PM  |   Last Updated: 29th January 2021 07:15 PM   |  A+A-


Last years budget copy

ಕಳೆದ ವರ್ಷ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಕೇಂದ್ರ ಬಜೆಟ್ ಪ್ರತಿ

Posted By : Sumana Upadhyaya
Source : PTI

ನವದೆಹಲಿ: ಈ ಬಾರಿ ಕೇಂದ್ರ ಬಜೆಟ್ ಪ್ರತಿಯ ಅಚ್ಚು ಹಾಕಿಸದಿರುವುದು ನಾಟಕೀಯ ವರ್ತನೆ ಎಂದು ಕಾಂಗ್ರೆಸ್ ನ ಲೋಕಸಭಾ ಸದಸ್ಯ ಮನೀಶ್ ತಿವಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಬಜೆಟ್ ನ ಪ್ರತಿಗಳನ್ನು ಪ್ರಿಂಟ್ ಹಾಕಿಸದಿರುವುದು ಕೇವಲ ಅಗ್ಗದ ತಂತ್ರವಷ್ಟೆ. ಪ್ರಪಂಚದಲ್ಲಿ ಇಂದು ಕೋವಿಡ್-19 10.5 ಮಿಲಿಯನ್ ಕೇಸುಗಳಿದ್ದು ಶೇಕಡಾ 11.57ರಷ್ಟು ಮಂದಿಯಲ್ಲಿದೆ. ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೂರವಾಗಿದೆ. ಹೀಗಿರುವಾಗ ಕೋವಿಡ್ ಹೆಸರಿನಲ್ಲಿ ಕಾಗದರಹಿತ ಬಜೆಟ್ ಮಂಡಿಸುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.

ಈ ಬಾರಿ ಕೋವಿಡ್-19 ಕಾರಣದಿಂದಾಗಿ ಹಣಕಾಸು ಸಚಿವಾಲಯ ಬಜೆಟ್ ಪ್ರತಿಯನ್ನು ಪುಸ್ತಕ ರೂಪದಲ್ಲಿ ಮುದ್ರಣ ಮಾಡದಿರಲು ತೀರ್ಮಾನಿಸಿದ್ದು ಬಜೆಟ್ ನ್ನು ಟೈಪ್ ಮಾಡಿ ಸಾಫ್ಟ್ ಕಾಪಿ ರೂಪದಲ್ಲಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp