ತಮಿಳುನಾಡಿನಲ್ಲಿ 9 ತಿಂಗಳ ನಂತರ ಜ. 19 ರಿಂದ 10, 12 ತರಗತಿಗಳಿಗೆ ಶಾಲೆ ಪುನರಾರಂಭ
ಮಹಾಮಾರಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ 9 ತಿಂಗಳ ನಂತರ ಜನವರಿ 19ರಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಪುನರಾರಂಭವಾಗುತ್ತಿವೆ.
Published: 12th January 2021 03:19 PM | Last Updated: 12th January 2021 03:19 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ 9 ತಿಂಗಳ ನಂತರ ಜನವರಿ 19ರಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಪುನರಾರಂಭವಾಗುತ್ತಿವೆ.
ಶೀಘ್ರದಲ್ಲೇ ಪಬ್ಲಿಕ್ ಪರೀಕ್ಷೆಗಳನ್ನು ಎದುರಿಸಲಿರುವ ಈ ವಿದ್ಯಾರ್ಥಿಗಳಿಗೆ ಜನವರಿ 19ರಿಂದ ಶಾಲೆಗಳನ್ನು ಮತ್ತೆ ತೆರೆಯಬಹುದು ಎಂದು ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಆದಾಗ್ಯೂ ಯಾವುದೇ ತರಗತಿಯಲ್ಲಿ 25 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದು ಸರ್ಕಾರ ಸೂಚಿಸಿದೆ.
10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಉಳಿದ ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಯಡಿ ಕೇವಲ ಈ ಎರಡು ತರಗತಿಗಳಿಗಾಗಿ ಶಾಲೆಯನ್ನು ತೆರೆಯಲಾಗುವುದು. ಸಾರ್ವಜನಿಕ ಆರೋಗ್ಯ, ವೈದ್ಯಕೀಯ ತಜ್ಞರು, ಜಿಲ್ಲಾಧಿಕಾರಿಗಳು, ಹಿರಿಯ ಸಚಿವರು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪಳನಿಸ್ವಾಮಿ ಅವರು ತಿಳಿಸಿದ್ದಾರೆ.