60 ರೈತರ ಸಾವಿನಿಂದ ಆಗದ ಮುಜುಗರ ಟ್ರಾಕ್ಟರ್ ರ್ಯಾಲಿಯಿಂದ ಆಯಿತೆ: ಮೋದಿ ಸರ್ಕಾರವನ್ನು ಜರಿದ ರಾಹುಲ್ ಗಾಂಧಿ

60 ರೈತರ ಸಾವಿನಿಂದ ಆಗದ ಮುಜುಗರೆ ಟ್ರಾಕ್ಟರ್ ರ್ಯಾಲಿಯಿಂದ ಆಯಿತೆ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Published: 13th January 2021 04:23 PM  |   Last Updated: 13th January 2021 04:42 PM   |  A+A-


Rahul gandhi

ರಾಹುಲ್ ಗಾಂಧಿ

Posted By : Srinivasamurthy VN
Source : Online Desk

ನವದೆಹಲಿ: 60 ರೈತರ ಸಾವಿನಿಂದ ಆಗದ ಮುಜುಗರೆ ಟ್ರಾಕ್ಟರ್ ರ್ಯಾಲಿಯಿಂದ ಆಯಿತೆ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸದಂತೆ ತಡೆಯಲು ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಪೊಲೀಸರ ಅನುಮತಿ ತೆಗೆದುಕೊಳ್ಳದೇ ಪ್ರತಿಭಟನೆ ನಡೆಸಬಾರದು ಎಂದು ರೈತರಿಗೆ ಕೋರ್ಟ್ ನೋಟೀಸ್ ನೀಡಿದೆ. 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಪ್ರತಿಭಟನೆಯಲ್ಲಿ 60 ರೈತರು ಸಾವನ್ನಪ್ಪಿದ್ದೇ ನಿಮಗೆ ಮುಜುಗರ ತರಲಿಲ್ಲ. ಆದರೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರೆ ಮುಜುಗರವಾಗುತ್ತದೆಯೇ.. ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. 

'ಪ್ರತಿಭಟನಾ ನಿರತ ರೈತರ ಪ್ರಕಾರ ಇದುವರೆಗೂ ಹೋರಾಟದಲ್ಲಿ ತೊಡಗಿಕೊಂಡಿದ್ದ ಸುಮಾರು 60 ಮಂದಿ ರೈತರು ಸಾವನ್ನಪ್ಪಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲವರು ಚಳಿಯಲ್ಲಿ ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ದಿನದಂದು ರೈತರು ಟ್ರಾಕ್ಟರ್ ರ್ಯಾಲಿ ನಡೆಸಿದರೆ  ದೇಶಕ್ಕೆ ಮುಜುಗುರವಾಗುತ್ತದೆ  ಎಂದು ಹೇಳುತ್ತಿದೆ. ಆದರೆ 60 ರೈತರ ಸಾವಿನಿಂದ ಆಗದ ಮುಜುಗರೆ ಟ್ರಾಕ್ಟರ್ ರ್ಯಾಲಿಯಿಂದ ಆಗುತ್ತದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 

ಜ.26ರಂದು ಟ್ರ್ಯಾಕ್ಟರ್ ರ‍್ಯಾಲಿ; ರೈತರಿಗೆ ಸುಪ್ರೀಂ ಕೋರ್ಟ್ ನೋಟೀಸ್ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದೂವರೆ ತಿಂಗಳಿನಿಂದ ರೈತರು ಹೋರಾಟ ಕೈಗೊಂಡಿದ್ದಾರೆ. ಕೇಂದ್ರ ಹಾಗೂ ರೈತರ ನಡುವೆ ಎಲ್ಲಾ ಮಾತುಕತೆಗಳು ವಿಫಲಗೊಂಡಿದ್ದು, ಹೋರಾಟದ ಭಾಗವಾಗಿ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವುದಾಗಿ ರೈತರು ತಿಳಿಸಿದ್ದರು. ಟ್ರ್ಯಾಕ್ಟರ್ ರ‍್ಯಾಲಿ ಗಣರಾಜ್ಯೋತ್ಸವ ಮೆರವಣಿಗೆಗೆ ಅಡ್ಡಿಯಾಗುತ್ತದೆ. ಮೆರವಣಿಗೆಗೆ ಅಡ್ಡಿಯಾದರೆ ರಾಷ್ಟ್ರಕ್ಕೆ ಮುಜುಗರವಾದಂತೆ ಎಂದು ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ಒತ್ತಿ ಹೇಳಿತ್ತು. 

ಮಂಗಳವಾರ ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆಯೊಡ್ಡಿರುವ ಸುಪ್ರೀಂ ಕೋರ್ಟ್, ಕೇಂದ್ರದ ಅಫಿಡವಿಟ್ ಕುರಿತೂ ವಿಚಾರಣೆ ನಡೆಸಿ, ರೈತರಿಗೆ ನೋಟೀಸ್ ನೀಡಿತ್ತು. ದೆಹಲಿ ಪೊಲೀಸರ ಅನುಮತಿ ಇದ್ದರೆ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ಎಂದು ತಿಳಿಸಿತ್ತು. 

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp