ಶಶಿಕಲಾ ಬಿಡುಗಡೆ ಸನ್ನಿಹಿತ: ಜಯಲಲಿತಾ ಆಪ್ತೆಯನ್ನು ಹೊಗಳಿದ ತಮಿಳುನಾಡು ಮಾಜಿ ಸಚಿವೆ!

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ವಿಕೆ ಶಶಿಕಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಇದೇ ಜನವರಿ 27ರಂದು ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಅವರನ್ನು ತಮಿಳುನಾಡು ಮಾಜಿ ಸಚಿವೆ ಎಸ್.ಗೋಕುಲ ಇಂದಿರಾ ಹೊಗಳಿದ್ದಾರೆ. 

Published: 13th January 2021 03:14 PM  |   Last Updated: 13th January 2021 03:25 PM   |  A+A-


Sasikala

ಶಶಿಕಲಾ

Posted By : Vishwanath S
Source : The New Indian Express

ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ವಿಕೆ ಶಶಿಕಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಇದೇ ಜನವರಿ 27ರಂದು ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಅವರನ್ನು ತಮಿಳುನಾಡು ಮಾಜಿ ಸಚಿವೆ ಎಸ್.ಗೋಕುಲ ಇಂದಿರಾ ಹೊಗಳಿದ್ದಾರೆ. 
 
ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಉದಯಾನಿಧಿ ಸ್ಟಾಲಿನ್ ಅವರ ಹೇಳಿಕೆ ವಿರೋಧಿಸಿ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗೋಕುಲ ಇಂದಿರಾ, "ಶಶಿಕಲಾ ಅವರು ಅಮ್ಮ(ಜಯಲಲಿತಾ) ಅವರೊಂದಿಗೆ ತಪಸ್ಸಿನ ಜೀವನವನ್ನು ನಡೆಸಿದ್ದರು. ನಮಗೆ ಶಶಿಕಲಾ ಬಗ್ಗೆ ಗೌರವವಿದೆ. ಹೀಗಾಗಿ ಉದಯನಿಧಿ ಸ್ಟಾಲಿನ್ ಹೇಳಿಕೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
 
ಕೆಲವು ದಿನಗಳ ಹಿಂದೆ, ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ, ಪಕ್ಷದ ಉಪ ಸಂಯೋಜಕ ಕೆ.ಪಿ.ಮುನುಸಾಮಿ, ಶಶಿಕಲಾ ಅವರ ಬಿಡುಗಡೆಯು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಐಎಡಿಎಂಕೆಯಲ್ಲಿ ಅಪಸ್ವರಗಳಿಲ್ಲ. ಇನ್ನು ಈಗ ಯಾರೂ ಪಕ್ಷವನ್ನು ಬಿಡುವುದಿಲ್ಲ ಎಂದು ಮುನುಸಾಮಿ ಹೇಳಿದ್ದರು.
 
ಮುಸುಸಾಮಿ ಅವರ ಹೇಳಿಕೆಗಳು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಶಶಿಕಲಾ ಅವರ ಹಿಂದಿರುಗುವಿಕೆ ಆಡಳಿತಾರೂಢ ಎಐಎಡಿಎಂಕೆಗೆ ಬಲ ನೀಡಬಹುದು ಎಂಬ ಮಾತುಗಳು ಎದ್ದಿದ್ದವು. ಏಕೆಂದರೆ ಅವರು ಪಕ್ಷದಲ್ಲಿ ಸಹಾನುಭೂತಿ ಹೊಂದಿದ್ದಾರೆ. ಆದರೆ ಟಿಟಿವಿ ದಿನಕರನ್ ಸೇರಿದಂತೆ ಅವರ ಕುಟುಂಬವನ್ನು ಏಪ್ರಿಲ್ 2017ರಿಂದ ಪಕ್ಷದಿಂದ ದೂರವಿಡಲಾಗಿದೆ.
 
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಶಶಿಕಲಾ ಅವರ ಬಿಡುಗಡೆ ಎಐಎಡಿಎಂಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp