ಪವಿತ್ರ ಗಂಗಾಸಾಗರ ಮೇಳ ಆಯೋಜನೆಗೆ ಹೈಕೋರ್ಟ್ ಅನುಮತಿ, 'ಇ-ಸ್ನಾನ' ಕ್ಕೆ ಒತ್ತು ನೀಡುವಂತೆ ಸೂಚನೆ
ಪವಿತ್ರ ಗಂಗಾ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಸಂಗಮ ಸ್ಥಳವಾದ ಗಂಗಾಸಾಗರದಲ್ಲಿ ಗಂಗಾಸಾಗರ ಮೇಳವನ್ನು ನಡೆಸಲು ಕಲ್ಕತ್ತಾ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಜನಸಂದಣಿಯನ್ನು ತಪ್ಪಿಸಲು 'ಇ-ಸ್ನಾನ'ಅಗತ್ಯಕ್ಕೆ ಒತ್ತು ನೀಡಬೇಕೆಂದು ಕೋರ್ಟ್ ಸೂಚಿಸಿದೆ.
Published: 13th January 2021 08:08 PM | Last Updated: 13th January 2021 08:09 PM | A+A A-

ಗಂಗಾಸಾಗರ
ಕೋಲ್ಕತ್ತಾ: ಪವಿತ್ರ ಗಂಗಾ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಸಂಗಮ ಸ್ಥಳವಾದ ಗಂಗಾಸಾಗರದಲ್ಲಿ ಗಂಗಾಸಾಗರ ಮೇಳವನ್ನು ನಡೆಸಲು ಕಲ್ಕತ್ತಾ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಜನಸಂದಣಿಯನ್ನು ತಪ್ಪಿಸಲು 'ಇ-ಸ್ನಾನ'ಅಗತ್ಯಕ್ಕೆ ಒತ್ತು ನೀಡಬೇಕೆಂದು ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗಂಗಾಸಾಗರದ ಪವಿತ್ರ ಮೇಳದಲ್ಲಿ ಭಾಗವಹಿಸುವವರಿಗೆ ಪವಿತ್ರ ನೀರಿನೊಂದಿಗೆ ಸಣ್ಣ ಪಾತ್ರೆಯನ್ನು 'ಇ-ಸ್ನಾನ' ಕಿಟ್ ಅನ್ನು ಒದಗಿಸುವಂತೆ ಕೇಳಿದೆ
ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಯಾತ್ರಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಎಇದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಪ್ರತಿವರ್ಷ ಲಕ್ಷಾಂತರ ಯಾತ್ರಾರ್ಥಿಗಳನ್ನು ಆಕರ್ಷಿಸುವ ಜಾತ್ರೆಯಲ್ಲಿ ಎಲ್ಲಾ ಆರೋಗ್ಯ ಪ್ರೋಟೋಕಾಲ್ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಸರ್ಕಾರ ವಿಭಾಗೀಯ ಪೀಠಕ್ಕೆ ವಿವರಿಸಿದೆ.
ಹೈಕೋರ್ಟ್ಗೆ ನೀಡಿದ ವರದಿಯಲ್ಲಿ, ರಾಜ್ಯದ ಆರೋಗ್ಯ ಸೇವೆಗಳ ನಿರ್ದೇಶಕರು (ಡಿಎಚ್ಎಸ್) ನದಿ ಅಥವಾ ಸಮುದ್ರದಲ್ಲಿ ಸ್ನಾನ ಮಾಡುವ ಮೂಲಕ ಕೋವಿಡ್ -19 ಹರಡುವಿಕೆ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹೇಳಿದ್ದಾರೆ."ಆದಾಗ್ಯೂ,ಮುನ್ನೆಚ್ಚರಿಕೆಯ ಕ್ರಮವಾಗಿ, ಯಾತ್ರಾರ್ಥಿಗಳು ಪರಸ್ಪರರ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಸ್ನಾನ ಮಾಡಲು ಅವಕಾಶವಿದೆ" ಎಂದು ಡಿಹೆಚ್ಎಸ್ ವರದಿಯಲ್ಲಿ ತಿಳಿಸಿದೆ.
ಜನವರಿ 8 ರಂದು ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗಂಗಾಸಾಗರ ಮೇಳವನ್ನು ಆಯೋಜಿಸಲು ಮಾಡಿರುವ ತಯಾರಿಯ ಬಗೆಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು, ಇದರ ಆಧಾರದ ಮೇಲೆ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಈ ವರ್ಷ ವಾರ್ಷಿಕ ಜಾತ್ರೆಗೆ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ತೀರ್ಮಾನಿಸಲಾಗಿತ್ತು.