ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು 8 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ
ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಭಾರತ ಎಂಟು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದೆ ಮತ್ತು ಈ ಕುರಿತು ಮಾತುಕತೆ ನಡೆಸಲು ವಿಶ್ವ ಸಮುದಾಯ ಮುಂದಾಗಬೇಕು ಮತ್ತು ಶೂನ್ಯ ಸಹಿಷ್ಣುತೆ ಹೊಂದಬೇಕು ಎಂದು ಕರೆ ನೀಡಿದೆ.
Published: 13th January 2021 08:56 PM | Last Updated: 13th January 2021 08:56 PM | A+A A-

ಎಸ್ ಜೈಶಂಕರ್
ನವದೆಹಲಿ: ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಭಾರತ ಎಂಟು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದೆ ಮತ್ತು ಈ ಕುರಿತು ಮಾತುಕತೆ ನಡೆಸಲು ವಿಶ್ವ ಸಮುದಾಯ ಮುಂದಾಗಬೇಕು ಮತ್ತು ಶೂನ್ಯ ಸಹಿಷ್ಣುತೆ ಹೊಂದಬೇಕು ಎಂದು ಕರೆ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಪರಿಷತ್(ಯುಎನ್ಎಸ್ಸಿ) ನಿರ್ಣಯ 1373 ರ 20 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ , ಭಯೋತ್ಪಾದನೆಯ ಭೀತಿಯನ್ನು ಪರಿಹರಿಸಿ ಮತ್ತು ಪರಿಣಾಮಕಾರಿ ಕ್ರಮವನ್ನು ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ರಿಯಾ ಯೋಜನೆಯ ಎಂಟು ಅಂಶಗಳೆಂದರೆ, . ಭಯೋತ್ಪಾದನೆಯನ್ನು ಎದುರಿಸಲು ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಳ್ಳುವುದು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಿನ್ನ ನೀತಿ ಇರಬಾರದು. ಭಯೋತ್ಪಾದರಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಂಬ ವ್ಯತ್ಯಾಸವಿಲ್ಲ. ನಿರ್ಬಂಧಗಳು ಮತ್ತು ಭಯೋತ್ಪಾದನೆಯನ್ನು ಎದುರಿಸುವ ಸಮಿತಿಗಳ ಕಾರ್ಯ ವಿಧಾನಗಳ ಸುಧಾರಣೆ.
ಜಗತ್ತನ್ನು ವಿಭಜಿಸುವ ಮತ್ತು ಸಾಮಾಜಿಕ ಬಟ್ಟೆಗೆ ಹಾನಿ ಮಾಡುವ ಪ್ರತ್ಯೇಕವಾದ ಚಿಂತನೆಯನ್ನು ದೃಢವಾಗಿ ತಡೆಯಬೇಕು. ವಿಶ್ವಸಂಸ್ಥೆಯ ನಿರ್ಬಂಧಗಳ ಅಡಿಯಲ್ಲಿ ವ್ಯಕ್ತಿಗಳು ಮತ್ತು ಘಟಕಗಳನ್ನು ಪಟ್ಟಿ ಮಾಡಬೇಕು. ಭಯೋತ್ಪಾದನೆ ಮತ್ತು ದೇಶೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಗುರುತಿಸುವುದು ಮತ್ತು ಪರಿಹರಿಸುವುದು ಮತ್ತಿತರರ ಪ್ರಮುಖ ವಿಷಯಗಳಾಗಿವೆ.