ಕಟ್ಟಡದೊಳಗಿನ ಉಗ್ರರನ್ನು ಪತ್ತೆಹಚ್ಚಲು 'ಮೈಕ್ರೋ ಕಾಪ್ಟರ್' ತಯಾರಿಸಿದ ಭಾರತೀಯ ಸೇನಾಧಿಕಾರಿ

ಭಯೋತ್ಪಾದಕರು ಅಡಗಿರುವ ಕಟ್ಟಡ ಅಥವಾ ಕೋಣೆಯೊಳಗೆ ಕಣ್ಗಾವಲು ಇರಿಸಲು ಸೇನೆಯು ಬಳಸಬಹುದಾದ 'ಮೈಕ್ರೋ ಕಾಪ್ಟರ್' ಅನ್ನು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ.

Published: 13th January 2021 06:28 PM  |   Last Updated: 13th January 2021 06:28 PM   |  A+A-


Indian Army

ಭಾರತೀಯ ಸೇನೆ

Posted By : Lingaraj Badiger
Source : ANI

ನವದೆಹಲಿ: ಭಯೋತ್ಪಾದಕರು ಅಡಗಿರುವ ಕಟ್ಟಡ ಅಥವಾ ಕೋಣೆಯೊಳಗೆ ಕಣ್ಗಾವಲು ಇರಿಸಲು ಸೇನೆಯು ಬಳಸಬಹುದಾದ 'ಮೈಕ್ರೋ ಕಾಪ್ಟರ್' ಅನ್ನು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ.

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಜಿವೈಕೆ ರೆಡ್ಡಿ ಅವರು ಮೈಕ್ರೋ ಕಾಪ್ಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಮೈಕ್ರೋ ಕಾಪ್ಟರ್ ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ವಿಶೇಷ ಪಡೆಗಳ ಬೆಟಾಲಿಯನ್ ಪ್ರಾಯೋಗಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು, ಮೈಕ್ರೋ ಡ್ರೋನ್‌ನಲ್ಲಿಯೇ ಹೆಚ್ಚಿನ ಸುಧಾರಣೆಗಳನ್ನು ತರಲಾಗಿದೆ.

ಗಡಿಯುದ್ದಕ್ಕೂ ಕಣ್ಗಾವಲುಗಾಗಿ ಸ್ವಿಚ್ ಡ್ರೋನ್ ಅನ್ನು ಖರೀದಿಸುವ ಒಪ್ಪಂದಕ್ಕೆ ಭಾರತೀಯ ಸೇನೆ ಸಹಿ ಹಾಕಿದೆ. ಲಂಬ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಡ್ರೋನ್ ಗರಿಷ್ಠ 4,500 ಮೀಟರ್ ಎತ್ತರದಲ್ಲಿ ಎರಡು ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಡಿಯಾ ಫೋರ್ಜ್‌ನ ಮೋಹಿತ್ ಬನ್ಸಾಲ್ ಹೇಳಿದ್ದಾರೆ. ಸಂಸ್ಥೆಯು ಕೆಲವು ವರ್ಷಗಳ ಹಿಂದೆ ಡಿಆರ್‌ಡಿಒ ಜೊತೆ ನೇತ್ರ ಡ್ರೋನ್ ಅನ್ನು ಅಭಿವೃದ್ಧಿಪಡಿಸಿತ್ತು.

ದೆಹಲಿಯಲ್ಲಿ ಭಾರತೀಯ ಸೇನೆಯ ಆಂತರಿಕ ನಾವೀನ್ಯತೆಯನ್ನು ಪ್ರದರ್ಶಿಸುವ ಕಾರ್ಯಕ್ರಮವೊಂದರಲ್ಲಿ ಇವುಗಳನ್ನು ಪ್ರದರ್ಶಿಸಲಾಯಿತು.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp