ನಿಷೇಧಿತ ನೋಟಿನ ರೂಪದಲ್ಲಿ 12.84 ಕೋಟಿ ರೂ ಠೇವಣಿ ಸಂಗ್ರಹ: ಜೆಕೆ ಬ್ಯಾಂಕಿನ ಕಾರ್ಯನಿರ್ವಾಹಕ ವ್ಯವಸ್ಥಾಪಕ, ಇತರ 5 ಮಂದಿ ವಿರುದ್ಧ ಎಫ್ಐಆರ್

ಅಪನಗದೀಕರಣದ ನಾಲ್ಕು ವರ್ಷಗಳಾದ ನಂತರ ನಿಷೇಧಿತ ನೋಟುಗಳ ರೂಪದಲ್ಲಿ 12.84 ಕೋಟಿ ರೂ.  ಠೇವಣಿ ಇಟ್ಟು ನಂತರ ಅದನ್ನು ಕಾನೂನುಬದ್ಧ ಹಣವಾಗಿ ನೆಟ್ ಬ್ಯಾಂಕಿಂಗ್ ಮೂಲಕ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಕ್ಕಾಗಿ ಬ್ಯಾಂಕಿನ ಕಾರ್ಯನಿರ್ವಾಹಕ ವ್ಯವಸ್ಥಾಪಕ, ಮೂರು ಸಂಸ್ಥೆಯ ಮಾಲೀಕರು ಮತ್ತು ಇಬ್ಬರು ವ್ಯಕ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ, 

Published: 13th January 2021 08:04 PM  |   Last Updated: 13th January 2021 08:04 PM   |  A+A-


Posted By : Raghavendra Adiga
Source : PTI

ನವದೆಹಲಿ: ಅಪನಗದೀಕರಣದ ನಾಲ್ಕು ವರ್ಷಗಳಾದ ನಂತರ ನಿಷೇಧಿತ ನೋಟುಗಳ ರೂಪದಲ್ಲಿ 12.84 ಕೋಟಿ ರೂ.  ಠೇವಣಿ ಇಟ್ಟು ನಂತರ ಅದನ್ನು ಕಾನೂನುಬದ್ಧ ಹಣವಾಗಿ ನೆಟ್ ಬ್ಯಾಂಕಿಂಗ್ ಮೂಲಕ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಕ್ಕಾಗಿ ಬ್ಯಾಂಕಿನ ಕಾರ್ಯನಿರ್ವಾಹಕ ವ್ಯವಸ್ಥಾಪಕ, ಮೂರು ಸಂಸ್ಥೆಯ ಮಾಲೀಕರು ಮತ್ತು ಇಬ್ಬರು ವ್ಯಕ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ, 

ಕಳೆದ ವರ್ಷ ಡಿಸೆಂಬರ್ 10 ರಂದು ದೊರೆತ "ಮೂಲ ಮಾಹಿತಿಯ" ಆಧಾರದ ಮೇಲೆ, ಸಿಬಿಐ  ಶಿವ ಟ್ರೇಡಿಂಗ್ ಕಂಪನಿ, ದಿವ್ಯಾಂಶಿ ಸೇಲ್ಸ್ ಕಾರ್ಪೊರೇಷನ್ ಮತ್ತು ಶ್ಯಾಮಾ ಟ್ರೇಡಿಂಗ್ ಕಂಪನಿ ಹೆಸರಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ಗಾಜಿಯಾಬಾದ್ ಶಾಖೆಯಲ್ಲಿ ಖಾತೆ ತೆರೆದಿದ್ದ  ರಾಹುಲ್ ಚೌಧರಿ ಮತ್ತು ದುಶ್ಯಂತ್ ಚೌಧರಿ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಬ್ಯಾಂಕಿನ ಕಾರ್ಯನಿರ್ವಾಹಕ ವ್ಯವಸ್ಥಾಪಕ ನೇತಾರ್ ಸಭರ್ವಾರ್ ಅವರೊಂದಿಗಿನ ಒಡನಾಟದ ಲಾಭವನ್ನು ಪಡೆದುಕೊಂಡ ಚೌಧರಿ ದ್ವಯರು ತಮ್ಮ ಮಾಲೀಕರ ಬದಲು ಖಾತೆಗಳನ್ನು ನಿರ್ವಹಿಸುತ್ತಿದ್ದರೆಂದು ಆರೋಪಿಸಲಾಗಿದ್ದು, ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ  ಸಿಬಿಐ ಆರೋಪಿತ ಜೋಡಿಯು ಶಿವ ಟ್ರೇಡಿಂಗ್‌ನ ಮಾಲೀಕರಾದ ಪಂಕಜ್ ಕುಮಾರ್, ದಿವ್ಯಾಂಶಿ ಸೇಲ್ಸ್‌ನ ವಿಕಾಸ್ ರತಿ ಮತ್ತು ಶ್ಯಾಮಾ ಟ್ರೇಡಿಂಗ್‌ನ ಘನಶ್ಯಾಮ ಪಟೇಲ್ - ಮತ್ತು ಸಭರ್ವಾರ್ ಕಂಪೆನಿಗಳ ಖಾತೆಗಳಲ್ಲಿ ನೋಂದಾಯಿತ ದೂರವಾಣಿ ಸಂಖ್ಯೆಗಳನ್ನು ಎಸ್‌ಎಂಎಸ್ ಎಚ್ಚರಿಕೆ ಸೇವೆಗಾಗಿ ಬದಲಾಯಿಸಿದೆ, ಇದರಿಂದ ನಿಧಿ ವರ್ಗಾವಣೆಗೆ ಅವುಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ  1,000 ರೂ ಮತ್ತು ಹಳೆಯ 500  ರೂ, ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ಆದೇಶಿಸಿತ್ತು. ಆ ನಂತರ ರ, ಬ್ಯಾಂಕ್ ನಿಯಮಗಳು ಮತ್ತು ಆರ್‌ಬಿಐ ಸೂಚನೆಗಳನ್ನು ಉಲ್ಲಂಘಿಸಿ ಮೂರು ಕಂಪನಿಗಳ ಖಾತೆಗಳಲ್ಲಿ ರಾಹುಲ್ ಮತ್ತು ದುಶ್ಯಂತ್ ಚೌಧರಿ 12.84 ಕೋಟಿ ರೂ. ನಗದು ಠೇವಣಿ ಇರಿಸಿದ್ದರೆಂದು ಅವರು ಹೇಳಿದರು. ಬದಲಾದ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು, ಈ ಮೊತ್ತವನ್ನು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್ಟಿಜಿಎಸ್) ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp