ಕೋಲ್ಕತ್ತಾ ಕೊಳೆಗೇರಿಯಲ್ಲಿ ಭಾರೀ ಬೆಂಕಿ ಅವಘಡ , ಹಲವು ಮನೆಗಳು ಭಸ್ಮ
ಕೋಲ್ಕತ್ತಾದ ಬಾಗ್ಬಜಾರ್ ಪ್ರದೇಶದ ಕೊಳೆಗೇರಿಯೊಂದರಲ್ಲಿ ಬುಧವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಗುಡಿಸಲುಗಳು ಸುಟ್ಟುಹೋಗೊವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 13th January 2021 11:06 PM | Last Updated: 13th January 2021 11:06 PM | A+A A-

ಕೋಲ್ಕತ್ತಾ ಕೊಳೆಗೇರಿಯಲ್ಲಿ ಬೆಂಕಿ
ಕೋಲ್ಕತ್ತಾ: ಕೋಲ್ಕತ್ತಾದ ಬಾಗ್ಬಜಾರ್ ಪ್ರದೇಶದ ಕೊಳೆಗೇರಿಯೊಂದರಲ್ಲಿ ಬುಧವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಗುಡಿಸಲುಗಳು ಸುಟ್ಟುಹೋಗೊವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ ಪೋರ್ಲಾಕ್ ಗೇಟ್ ಸೇತುವೆ ಬಳಿಯ ಬಾಗ್ಬಜಾರ್ ಮಹಿಳಾ ಕಾಲೇಜಿನ ಪಕ್ಕದಲ್ಲಿರುವ ಕ್ಷಿರೋದ್ದ್ಯಾವಿನೋದ್ ಅವೆನ್ಯೂದಲ್ಲಿನ ಕೊಳೆಗೇರಿಯಹಲವಾರು ಮನೆಗಳಿಗೆ ಬೆಂಕಿ ಆವರಿಸಿದೆ. ಕನಿಷ್ಠ 24 ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.
ಕೊಳೆಗೇರಿಗಳಲ್ಲಿ ಸ್ಫೋಟಗಳು ಕೇಳಿಬಂದವು, ಬೆಂಕಿಗೆ ಆಹುತಿಯಾಗಿರುವ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ . ಹೆಚ್ಚಿನ ಜನರನ್ನು ಸಮಯಕ್ಕೆ ಸರಿಯಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಜನರನ್ನು ಹೊರಗೆ ಕರೆದೊಯ್ಯುತ್ತಿದ್ದಂತೆ ಪಕ್ಕದ ಶಾರದಾ ಮೇಯರ್ ಬ್ಯಾರಿಗೂ ಬೆಂಕಿ ಹರಡಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಬೆಂಕಿಗೆ ಏನು ಕಾರಣವೆಂದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲ್ಲು ಪ್ರಯತ್ನಿಸಿದ್ದಾರೆ.ಅದು ಶೀಘ್ರದಲ್ಲೇ ನಿಯಂತ್ರಣಕ್ಕೆ ಬರಲಿದೆ. ನಾವು ಇಡೀ ಪ್ರದೇಶವನ್ನು ಖಾಲಿ ಮಾಡಿದ್ದೇವೆ. ಹಲವಾರು ಸ್ಫೋಟಗಳು ಸಂಭವಿಸಿವೆ, ಅದು ಗ್ಯಾಸ್ ಸಿಲಿಂಡರ್ಗಳ ಕಾರಣದಿಂದಾಗಿ ಈ ಸ್ಫೋಟಗಳು ಸಂಭವಿಸಿರಬಹುದು "ಕೋಲ್ಕತಾ ಪೊಲೀಸರ ಹಿರಿಯ ಅಧಿಕಾರಿ ಹೇಳಿದರು. ಅಗ್ನಿಶಾಮಕ ಒಂದು ಗಂಟೆ ತಡವಾಗಿ ಸ್ಥಳಕ್ಕೆ ತಲುಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಇದರಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬರುವುದು ಕಠಿಣವಾಗಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ಒಂದೆರಡು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.ಜನಸಮೂಹವನ್ನು ನಿಯಂತ್ರಿಸಲು ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಕ್ಷಿರೋದ್ವಿದ್ಯಾವಿನೋದ್ಅವೆನ್ಯೂ ಮತ್ತು ನಗರದ ಉತ್ತರದ ಅಂಚಿನಲ್ಲಿ ವಾಸಿಸುವ ಜನರ ಜೀವನಾಡಿಯಾಗಿರುವ ಚಿಟ್ಪೋರ್ ಲಾಕ್ ಗೇಟ್ ಸೇತುವೆಯಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು."ನಾವು ಇಡೀ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದೇವೆ. ಕನಿಷ್ಠ 40 ಕುಟುಂಬಗಳು ಮನೆಗಳನ್ನು ಬೆಂಕಿಯಿಂದ ಸಮಸ್ಯೆಗೆ ಸಿಲುಕಿದೆ. ಪುಸ್ತಕಗಳ ಗೋಡೋನ್ಸಹ ಮುಚ್ಚಲ್ಪಟ್ಟಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.