ಕೃಷಿ ಕಾನೂನುಗಳ 'ಒಂದು ಲಕ್ಷ ಪ್ರತಿಗಳನ್ನು' ಸುಟ್ಟು ಹಾಕುವ ಮೂಲಕ ಲೋಹ್ರಿ ಹಬ್ಬ ಆಚರಿಸಿದ ರೈತರು
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಗಡಿಯಲ್ಲಿ ಕಳೆದ 49 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ವಿವಾದಾತ್ಮಕ ಕೃಷಿ ಕಾನೂನುಗಳ ಒಂದು ಲಕ್ಷ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ಲೋಹ್ರಿ ಹಬ್ಬವನ್ನು ಆಚರಿಸಿದರು.
Published: 13th January 2021 08:45 PM | Last Updated: 13th January 2021 08:45 PM | A+A A-

ಕೃಷಿ ಕಾನೂನುಗಳ ಪ್ರತಿ ಸುಡುತ್ತಿರುವ ರೈತರು
ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಗಡಿಯಲ್ಲಿ ಕಳೆದ 49 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ವಿವಾದಾತ್ಮಕ ಕೃಷಿ ಕಾನೂನುಗಳ ಒಂದು ಲಕ್ಷ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ಲೋಹ್ರಿ ಹಬ್ಬವನ್ನು ಆಚರಿಸಿದರು.
ಇಂದು ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು ಮೂರು ಕೃಷಿ ಕಾನೂನುಗಳ ಒಂದು ಲಕ್ಷ ಪ್ರತಿಗಳನ್ನು ಸುಟ್ಟುಹಾಕುವ ಮೂಲಕ ಲೋಹ್ರಿ ಹಬ್ಬ ಆಚರಿಸಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಪರಮಜೀತ್ ಸಿಂಗ್ ಅವರು ಹೇಳಿದ್ದಾರೆ.
ರಾಬಿ ಬೆಳೆಗಳ ಕೊಯ್ಲನ್ನು ಗುರುತಿಸಲು ಲೋಹರಿ ಹಬ್ಬವನ್ನು ಪಂಜಾಬ್ ಮತ್ತು ಹರಿಯಾಣದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.
"ನಾವು ಈಗ ಹಬ್ಬ ಆಚರಿಸುವುದಿಲ್ಲ. ಈ ಕಪ್ಪು ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದ ದಿನವೇ ನಾವು ಈ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ" ಎಂದು ಹರಿಯಾಣದ ಕರ್ನಾಲ್ ಜಿಲ್ಲೆಯ 65 ವರ್ಷದ ಗುರ್ಪ್ರೀತ್ ಸಿಂಗ್ ಸಂಧು ಅವರು ಹೇಳಿದ್ದಾರೆ.