ಹಕ್ಕಿಜ್ವರ: ಏಷ್ಯಾದ ಅತಿ ದೊಡ್ಡ ಚಿಕನ್ ಮಾರ್ಕೆಟ್ ಸ್ಯಾಂಪಲ್ಸ್ ವರದಿ ಪ್ರಕಟ!

ಏಷ್ಯಾದ ಅತಿದೊಡ್ಡ ಚಿಕನ್ ಮಾರ್ಕೆಟ್ ಆಗಿರುವ ಗಾಜಿಪುರದಲ್ಲಿ ಹಕ್ಕಿ ಜ್ವರ ಕುರಿತು ನಡೆಸಲಾದ ಎಲ್ಲಾ 100 ಮಾದರಿಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಪಶು ಸಂಗೋಪನಾ ಘಟಕ ಗುರುವಾರ ಹೇಳಿದೆ. 

Published: 14th January 2021 02:32 PM  |   Last Updated: 14th January 2021 02:32 PM   |  A+A-


Chiken1

ಸಾಂದರ್ಭಿಕ ಚಿತ್ರ

PTI

ನವದೆಹಲಿ: ಏಷ್ಯಾದ ಅತಿದೊಡ್ಡ ಚಿಕನ್ ಮಾರ್ಕೆಟ್ ಆಗಿರುವ ಗಾಜಿಪುರದಲ್ಲಿ ಹಕ್ಕಿ ಜ್ವರ ಕುರಿತು ನಡೆಸಲಾದ ಎಲ್ಲಾ 100 ಮಾದರಿಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಪಶು ಸಂಗೋಪನಾ ಘಟಕ ಗುರುವಾರ ಹೇಳಿದೆ. 

ರಾಷ್ಟ್ರ ರಾಜಧಾನಿಯಲ್ಲಿನ ಕೆರೆಗಳು ಮತ್ತು ಪಾರ್ಕ್ ನಲ್ಲಿನ ಕಾಗೆಗಳು ಮತ್ತು ಬಾತುಕೋಳಿಗಳ ಸ್ಯಾಂಪಲ್ಸ್ ವರದಿಯಲ್ಲಿ ಹಕ್ಕಿಜ್ವರದ ಪಾಸಿಟಿವ್ ಬಂದ ಮೂರು ದಿನಗಳ ನಂತರ ಈ ಫಲಿತಾಂಶ ಬಂದಿದೆ. 

ಇದರಿಂದಾಗಿ ನಗರದ ಹೊರಗಿನಿಂದ ತಂದ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಕೋಳಿ ಮಾರಾಟವನ್ನು ದೆಹಲಿ ಸರ್ಕಾರ ಸೋಮವಾರ ನಿರ್ಬಂಧಿಸಿತು. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಮುಂದಿನ 10 ದಿನಗಳ ಕಾಲ ಪೂರ್ವ ದೆಹಲಿಯ ಚಿಕನ್ ಮಾರುಕಟ್ಟೆಯನ್ನು ಮುಚ್ಚಿದೆ. ದೆಹಲಿ- ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ ಮಾರ್ಕೆಟ್,  ಚಿಕನ್, ಮೊಟ್ಟೆ ಹಾಗೂ ಮಾಂಸ ಮಾರಾಟದ ಪ್ರಮುಖ ಸ್ಥಳವಾಗಿದೆ.

ಗಾಜಿಪುರ ಮಾರ್ಕೆಟ್ ನಲ್ಲಿ 35 ಕೋಳಿಗಳಿಂದ ಸಂಗ್ರಹಿಸಲಾದ 100 ಸ್ಯಾಂಪಲ್ಸ್ ವರದಿಯಲ್ಲಿ ಹಕ್ಕಿಜ್ವರದ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಹೈನುಗಾರಿಕೆ ಘಟಕದ ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ. 

ದೆಹಲಿಯಲ್ಲಿ ಕೋಳಿಗಳಲ್ಲಿ  ಹಕ್ಕಿ ಜ್ವರ ಹರಡುತ್ತಿಲ್ಲ ಎಂಬುದು ಇದರಿಂದ ಅರ್ಥವಾಗಿದೆ. ಆದಾಗ್ಯೂ, ನಾಲ್ಕು ಮಾದರಿಗಳಲ್ಲಿ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟತೆಗಾಗಿ ಭೂಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp