ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬ ಆಚರಣೆ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಜನತೆಗೆ ಶುಭಾಶಯ 

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ದೇಶ, ರಾಜ್ಯದ ಗಣ್ಯರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನತೆಗೆ ಶುಭಾಶಯ ಕೋರಿದ್ದಾರೆ.  

Published: 14th January 2021 09:19 AM  |   Last Updated: 14th January 2021 11:00 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನವದೆಹಲಿ/ಬೆಂಗಳೂರು:  ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ದೇಶ, ರಾಜ್ಯದ ಗಣ್ಯರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನತೆಗೆ ಶುಭಾಶಯ ಕೋರಿದ್ದಾರೆ. 
ಮಕರ ಸಂಕ್ರಾಂತಿ ಈ ಶುಭ ಸಂದರ್ಭದಲ್ಲಿ ಸಮಾಜದಲ್ಲಿ ಜನರ ಮಧ್ಯೆ ಸ್ನೇಹ, ಪ್ರೀತಿ, ಸೌಹಾರ್ದತೆ, ಬಾಂಧವ್ಯ ವೃದ್ಧಿಸಲಿ ಈ ಮೂಲಕ ದೇಶ ಸಮೃದ್ಧವಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ಉತ್ಸಾಹದಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಭಾರತದ ವೈವಿಧ್ಯತೆ ಮತ್ತು ವಿವಿಧತೆಗೆ ಈ ಸಾಂಪ್ರದಾಯಿಕ ಆಚರಣೆ ಸಾಕ್ಷಿಯಾಗಿದೆ. ಭೂಮಿತಾಯಿಯನ್ನು ಗೌರವಿಸುವ ಸಂಕೇತ ಕೂಡ ಈ ಮಕರ ಸಂಕ್ರಾಂತಿಯಾಗಿದೆ, ಈ ಹಬ್ಬ ಎಲ್ಲರ ಬಾಳಲ್ಲಿ ಸುಖ, ಸಂತೋಷ ತರಲಿ ಎಂದು ಹರಸಿದ್ದಾರೆ.

Makar Sankranti is marked with enthusiasm in several parts of India. This auspicious festival illustrates India’s diversity and the vibrancy of our traditions. It also reaffirms the importance of respecting Mother Nature.

ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ, ಸಂತಸ, ಸಮೃದ್ಧಿಗಳ ಹೊಂಗಿರಣ ಎಲ್ಲೆಡೆ ಪಸರಿಸಲಿ. ಈ ಸುಗ್ಗಿಕಾಲವು ಎಲ್ಲರಿಗೂ ಆರೋಗ್ಯ, ಯಶಸ್ಸು, ನಲಿವುಗಳನ್ನು, ವಿಶೇಷವಾಗಿ ಅನ್ನದಾತ ರೈತನಿಗೆ ನೆಮ್ಮದಿಯನ್ನು ಹೊತ್ತು ತರಲಿ, ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ. ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಭ ಕೋರಿದ್ದಾರೆ.

ಋತು ಮನ್ವಂತರದ ಹಬ್ಬ ಮಕರ ಸಂಕ್ರಾಂತಿ ’ಮತಿ ಮತಿಯಲಿ ಸುಖ-ಶಾಂತಿಯ ಬಿತ್ತಿಬೆಳೆಯಲಿ’, ರೈತರ ಸಂಕಷ್ಟಗಳನ್ನು ಕಳೆಯಲಿ; ನೆಮ್ಮದಿಯ ಬದುಕು ಸಕಲ ಜನತೆಯ ಹಿತ ಕಾಯಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಾಡಿನ ಜನತೆಗೆ ಟ್ವೀಟ್ ಸಂದೇಶದ ಮೂಲಕ ಶುಭ ಕೋರಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp