ಕೃಷಿ ಕಾನೂನು: ಸರ್ಕಾರ ರೈತರನ್ನು ನಾಶ ಮಾಡಲು ಪಿತೂರಿ ರೂಪಿಸುತ್ತಿದೆ- ರಾಹುಲ್ ಗಾಂಧಿ 

ಸಂಕ್ರಾಂತಿ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Published: 14th January 2021 05:57 PM  |   Last Updated: 14th January 2021 05:57 PM   |  A+A-


Farm laws: Govt conspiring to destroy farmers, says Rahul Gandhi in Tamil Nadu

ಕೃಷಿ ಕಾನೂನು: ಸರ್ಕಾರ ರೈತರನ್ನು ನಾಶ ಮಾಡಲು ಪಿತೂರಿ ರೂಪಿಸುತ್ತಿದೆ- ರಾಹುಲ್ ಗಾಂಧಿ

Posted By : Srinivas Rao BV
Source : The New Indian Express

ಮಧುರೈ: ಸಂಕ್ರಾಂತಿ ಹಬ್ಬದಂದು ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ, ಕೃಷಿ ಕಾನೂನುಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸರ್ಕಾರ ರೈತರನ್ನು ನಾಶ ಮಾಡುವುದಕ್ಕಾಗಿ ಹೊಸ ಕೃಷಿ ಕಾನೂನುಗಳ ಮೂಲಕ ಪಿತೂರಿ ನಡೆಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಪಕ್ಷ ರೈತರ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ಮೂಲಕ ತನ್ನ ಇಬ್ಬರು ಅಥವಾ ಮೂವರು ಸ್ನೇಹಿತರಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಕೇಂದ್ರ ಸರ್ಕಾರ ರೈತರನ್ನು ಕೇವಲ ನಿರ್ಲಕ್ಷಿಸುತ್ತಿಲ್ಲ, ಆದರೆ ನಾಶ ಮಾಡಲು ಯತ್ನಿಸುತ್ತಿದೆ, ನಿರ್ಲಕ್ಷ್ಯ ಮಾಡುವುದಕ್ಕೂ ನಾಶ ಮಾಡುವುದಕ್ಕೂ ವ್ಯತ್ಯಾಸವಿದೆ, ಕೇಂದ್ರ ಸರ್ಕಾರ ರೈತರದ್ದೆಲ್ಲವನ್ನೂ ಅವರ ಮೂವರು ಸ್ನೇಹಿತರಿಗೆ ನೀಡಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp