'ಹೆಣ್ಣುಮಕ್ಕಳಿಗೆ 15 ವರ್ಷಕ್ಕೆ ಮಕ್ಕಳನ್ನು ಹೆರುವ ಸಾಮರ್ಥ್ಯವಿರುವಾಗ ಮದುವೆ ವಯಸ್ಸನ್ನು 18ಕ್ಕೆ ಏಕೆ ಏರಿಸಬೇಕು?'
ಹೆಣ್ಣು ಮಕ್ಕಳು 15ನೇ ವರ್ಷಕ್ಕೆ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿದಾಗ ಅವರ ಮದುವೆಯ ವಯಸ್ಸನ್ನು ಏಕೆ 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ಮಧ್ಯಪ್ರದೇಶ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ಪ್ರಶ್ನಿಸುವ ಮೂಲಕ ವಿವಾದಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ.
Published: 14th January 2021 07:57 AM | Last Updated: 14th January 2021 07:57 AM | A+A A-

ಸಜ್ಜನ್ ಸಿಂಗ್ ವರ್ಮಾ
ಭೂಪಾಲ್ : ಹೆಣ್ಣು ಮಕ್ಕಳು 15ನೇ ವರ್ಷಕ್ಕೆ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿದಾಗ ಅವರ ಮದುವೆಯ ವಯಸ್ಸನ್ನು ಏಕೆ 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ಮಧ್ಯಪ್ರದೇಶ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ಪ್ರಶ್ನಿಸುವ ಮೂಲಕ ವಿವಾದಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಣ್ ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡುವತ್ತ ಕೇಂದ್ರ ಚಿಂತನೆ ನಡೆಸಬೇಕು ಎಂದಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಕಮಲನಾಥ್ ಆಪ್ತರಾಗಿರುವ ವರ್ಮಾ ಈ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಹೆಣ್ಣುಮಕ್ಕಳಿಗೆ 15ನೇ ವರ್ಷಕ್ಕೆ ಸಂತೋನೋತ್ಪತ್ತಿ ಮಾಡುವ ಸಾಮರ್ಥ್ಯ ಇರುತ್ತದೆ. ಇದು ನನ್ನ ಅಧ್ಯಯನವಲ್ಲ. ವೈದ್ಯರೇ ಈ ಕುರಿತು ತಿಳಿಸಿದ್ದಾರೆ. ಹುಡುಗಿಯರು 15ನೇ
ವಯಸ್ಸಿನಲ್ಲಿ ಮಕ್ಕಳನ್ನು ಹೆರಲು ಅರ್ಹವಾಗಿರುತ್ತಾರೆ. ಇದೇ ಕಾರಣದಿಂದ ಹುಡುಗಿಯರು 18 ವರ್ಷಕ್ಕೆ ಮದುವೆಯಾಗಲು ಪ್ರಬುದ್ಧರಾಗುತ್ತಾರೆ. ಅಷ್ಟೇ ಅಲ್ಲದೇ ಹುಡುಗಿಯರು ತಮ್ಮ ಮದುವೆಯಾದ ಗಂಡನ ಮನೆಗೆ ಹೋಗಿ. 18 ವರ್ಷ ತುಂಬಿದ ಬಳಿಕ ಅಲ್ಲಿ ಸುಖ ಸಂತೋಷದಿಂದ ಇರಬೇಕು ಎಂದಿದ್ದಾರೆ.
ಇನ್ನು ಸಿಎಂ ಶಿವರಾಜ್ ಸಿಂಗ್ ವಿರುದ್ಧ ಟೀಕೆ ಮಾಡಿರುವ ಅವರು, ಹುಡುಗಿರಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಅವರೇನು ವಿಜ್ಞಾನಿಯೋ ಅಥವಾ ಮಹಾನ್ ವೈದ್ಯರೋ ಎಂದು ಟೀಕಿಸಿದ್ದಾರೆ.