73ನೇ ರಾಷ್ಟ್ರೀಯ ಸೇನಾ ದಿನ: ಹುತಾತ್ಮ ಯೋಧರಿಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರಿಂದ ಗೌರವ ನಮನ

ದೇಶಾದ್ಯಂತ ಶುಕ್ರವಾರವಾರ 73ನೇ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರಿಂದ ಗೌರವ ನಮನ ಸಲ್ಲಿಸಿದ್ದಾರೆ.

Published: 15th January 2021 10:00 AM  |   Last Updated: 15th January 2021 10:56 AM   |  A+A-


CDS General Bipin Rawat pay tributes at National War Memorial

ವೀರ ಯೋಧರಿಗೆ ಗೌರವ ಸಲ್ಲಿಸುತ್ತಿರುವ ಸೇನಾ ಮುಖ್ಯಸ್ಥರು

Posted By : Manjula VN
Source : ANI

ನವದೆಹಲಿ: ದೇಶಾದ್ಯಂತ ಶುಕ್ರವಾರವಾರ 73ನೇ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರಿಂದ ಗೌರವ ನಮನ ಸಲ್ಲಿಸಿದ್ದಾರೆ. 

ರಾಷ್ಟ್ರೀಯ ಸೇನಾ ದಿನ ಹಿನ್ನೆಲೆಯಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭೂ ಸೇನೆ ಮುಖ್ಯಸ್ಥ ಎಂಎಂ ನರವಾಣೆ, ವಾಯುಪಡೆ ಮುಖ್ಯಸ್ಥ ಆರ್'ಕೆಎಸ್ ಭದೌರಿಯಾ ಹಾಗೂ ನೌಕಾಪಡೆ ಮುಖ್ಯಸ್ಥ ಕರಂಬೀರ್ ಸಿಂಗ್ ಅವರು ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಅಲ್ಲದೆ, ಸೇನೆಯ ಎಲ್ಲಾ ದರ್ಜೆಯ ಅಧಿಕಾರಿಗಳು, ಅವರ ಕುಟುಂಬವರ್ಗದವರಿಗೆ, ನಿವೃತ್ತ ಸೇನಾ ಯೋಧರು, ನಿವೃತ್ತ ಅಧಿಕಾರಿಗಳಿಗೆ 73ನೇ ಸೇನಾ ದಿನದ ಅಂಗವಾಗಿ ಅಭಿನಂದನೆ ಸಲ್ಲಿಸಿದರು.

ರಾಷ್ಟ್ರೀಯ ಸೇನಾ ದಿನ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಮೂರು ಸೇನಾಪಡೆಗಳ ಪ್ರಧಾನ ಕಚೇರಿಗಳು ದೇಶದ ಸೈನಿಕರ ನೆನಪಿಗಾಗಿ ಸೇನಾ ದಿನವನ್ನು ಆಚರಿಸುತ್ತೇವೆ. 

ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಇವರು ಕರ್ನಾಟಕದ ಕೊಡಗಿನವರು. 

ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ಬಚರ್ ಅವರಿಂದ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಗೌರವ ಸಮರ್ಪಿಸಲಾಗುತ್ತದೆ. ಶೌರ್ಯ ಪ್ರಶಸ್ತಿಗಳು ಮತ್ತು ಸೇನಾ ಪದಕಗಳನ್ನು ಸಹ ಈ ದಿನ ನೀಡಲಾಗುತ್ತದೆ. 

ಈ ದಿನವನ್ನು ವಿವಿಧ ಸೇನಾ ಕಮಾಂಡ್ ಕೇಂದ್ರಗಳಲ್ಲಿ ಮಿಲಿಟರಿ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ. ಆ ಮೆರವಣಿಗೆಗಳಲ್ಲಿ ವಿವಿಧ ವೈಮಾನಿಕ ಸಾಹಸಗಳು ಮತ್ತು ಬೈಕ್ ಪಿರಮಿಡ್‌ಗಳನ್ನು ಪ್ರದರ್ಶಿಸಲಾಗುತ್ತದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp