ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡು ಹಾರಿಸಿಕೊಂಡು ಕೋಬ್ರಾ ಕಮಾಂಡೋ ಆತ್ಮಹತ್ಯೆ

ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡು ಹಾರಿಸಿಕೊಂಡು ಕೋಬ್ರಾ ಕಮಾಂಡೋ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚತ್ತೀಸ್ ಘದದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. 

Published: 15th January 2021 03:01 PM  |   Last Updated: 15th January 2021 04:44 PM   |  A+A-


CoBRA commando fatally shoots self during anti-Naxal operation

ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡು ಹಾರಿಸಿಕೊಂಡು ಕೋಬ್ರಾ ಕಮಾಂಡೋ ಆತ್ಮಹತ್ಯೆ

Posted By : Srinivas Rao BV
Source : The New Indian Express

ರಾಯ್ ಪುರ: ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡು ಹಾರಿಸಿಕೊಂಡು ಕೋಬ್ರಾ ಕಮಾಂಡೋ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚತ್ತೀಸ್ ಘದದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. 

ಶುಕ್ರವಾರದಂದು ಮುಂಜಾನೆ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕೋಬ್ರಾಸ್ ನ 206ನೇ ಬೆಟಾಲಿಯನ್ ನ ಮುಖ್ಯಪೇದೆಯಾಗಿದ್ದ ಹರ್ಜೀತ್ ಸಿಂಗ್ (40) ತನ್ನದೇ ಸರ್ವೀಸ್ ರೈಫಲ್ ನಿಂದ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾರೆ. 

ಗುರುವಾರ ರಾತ್ರಿ ತೆಮೆಲ್ವಾಡ ಕ್ಯಾಂಪ್ ನಲ್ಲಿ ಅಧಿಕಾರಿಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆ ಪ್ರಾರಂಭಿಸಿತ್ತು. ಕಾರ್ಯಾಚರಣೆ ಪ್ರಗತಿಯಲ್ಲಿರುವಾಗಲೇ ಸಿಂಗ್ ತಮ್ಮ ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತದೆ, ಹೆಚ್ಚಿನ ತನಿಖೆ ಮುಂದುವರೆದಿದೆ, ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp