ದೆಹಲಿಯಲ್ಲಿ ಪೈಶಾಚಿಕ ಕೃತ್ಯ:  13 ವರ್ಷದ ಬಾಲಕನನ್ನು ಲಿಂಗ ಪರಿವರ್ತನೆಗೊಳಿಸಿ ಕಾಮುಕರಿಂದ ನಿರಂತರ ಅತ್ಯಾಚಾರ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಂತ ಅಮಾನುಷ ಘಟನೆಯೊಂದರಲ್ಲಿ 13 ವರ್ಷದ ಬಾಲಕನನ್ನು ಲಿಂಗ ಪರಿವರ್ತನೆ ಮಾಡಿಸಿ ಆರು ಮಂದಿ ಆರೋಪಿಗಳು ಹಲವಾರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದ ಸಂಬಂಧ ಇಬ್ಬರನ್ನುಬಂಧಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗದ ಹೇಳಿಕೆ ತಿಳಿಸಿದೆ.

Published: 15th January 2021 11:01 PM  |   Last Updated: 15th January 2021 11:02 PM   |  A+A-


Posted By : Raghavendra Adiga
Source : Online Desk

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಂತ ಅಮಾನುಷ ಘಟನೆಯೊಂದರಲ್ಲಿ 13 ವರ್ಷದ ಬಾಲಕನನ್ನು ಲಿಂಗ ಪರಿವರ್ತನೆ ಮಾಡಿಸಿ ಆರು ಮಂದಿ ಆರೋಪಿಗಳು ಹಲವಾರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದ ಸಂಬಂಧ ಇಬ್ಬರನ್ನುಬಂಧಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗದ ಹೇಳಿಕೆ ತಿಳಿಸಿದೆ.

ಸುಮಾರು ಮೂರು ವರ್ಷಗಳ ಹಿಂದೆ ದೆಹಲಿಯ ಲಕ್ಷ್ಮಿ ನಗರ ಪ್ರದೇಶದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಶುಭಮ್ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕನನ್ನು ಆರೋಪಿಗಳು ಭೇಟಿಯಾಗಿದ್ದಾರೆ. 13 ವರ್ಷದ ಬಾಲಕನಿಗೆ ನೃತ್ಯ ಕಲಿಸುವ ನೆಪದಲ್ಲಿ ಆರೋಪಿ ಸ್ನೇಹ ಬೆಳೆಸಿದ್ದು, ಅವನನ್ನು ಅವರೊಂದಿಗೆ ಕರೆದೊಯ್ದಿದ್ದಾನೆ. ಸ್ವಲ್ಪ ಸಮಯದವರೆಗೆ, ಶುಭಮ್ ಗೆ ಕಮರ್ಷಿಯಲ್ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನಿಡಾಲಾಗಿದೆ.. ಆದರೆ ಅಂತಿಮವಾಗಿ, ಆರೋಪಿ ಬಾಲಕನಿಗೆ ನೀನೀಗ ನಮ್ಮೊಂದ್ಗೇ ಬದುಕಬೇಕು ಹಾಗೂ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾನೆ.

ಇದನ್ನು ಅನುಸರಿಸಿ ಶುಭಮ್‌ಗೆ ನಿರಂತರವಾಗಿ ಮಾದಕ ದ್ರವ್ಯಗಳನ್ನು ನೀಡಲಾಗುತ್ತಿತ್ತು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ನಂತರ, ಆರೋಪಿಯು ಬಾಲಕನಿಗೆ ಬಲವಂತದಿಂದ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ತನಗೆ ಹಾರ್ಮೋನುಗಳನ್ನು ಸಹ ನೀಡಲಾಯಿತು ಎಂದು ಶುಭಮ್ ಹೇಳಿದ್ದಾರೆ, ಇದು ಅವನನ್ನು ಹೆಣ್ಣಾಗುವಂತೆ ಮಾಡಿತ್ತು. ನಂತರ ಆರೋಪಿ ಮತ್ತು ಆತನ ಸ್ನೇಹಿತರು 13 ವರ್ಷದ ಬಾಲಕನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ.  ಅವರು ಹಲವಾರು ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡುವ "ಗಿರಾಕಿ"ಗಳನ್ನೂ ಸಹ ಕರೆತಂದಿದ್ದಾರೆ.

ಈ ಕೃತ್ಯದ ಬಗ್ಗೆ  ಯಾರಿಗಾದರೂ ಏನಾದರೂ ಹೇಳಿದರೆ  ಬಾಲಕನ ಕುಟುಂಬವನ್ನು ಕೊಲ್ಲುವುದಾಗಿ ಆರೋಪಿಗಳುಬೆದರಿಕೆ ಹಾಕಿದರು. ನಂತರ, ಆರೋಪಿಗಳು ಶುಭಮ್  ನ  ಸ್ನೇಹಿತನನ್ನು ಸಹ ಅವರೊಂದಿಗೆ ಸೇರಿಸಲು ಯಶಸ್ವಿಯಾಗಿದ್ದರು. ಮಾರ್ಚ್ 2020 ರಲ್ಲಿ, ಕೊರೋನಾ ಹರಡುವಿಕೆ ನಿಯಂತ್ರಿಸಲು ಮೊದಲ ಬಾರಿಗೆ  ಲಾಕ್ ಡೌನ್ ವಿಧಿಸಿದಾಗ, ಶುಭಮ್ ಮತ್ತು ಅವನ ಸ್ನೇಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹುಡುಗರು ಶುಭಮ್ ಅವರ ತಾಯಿಯ ಬಳಿಗೆ ಹೋದರು, ಅವರು ಬಾಡಿಗೆ ವಸತಿ ಪಡೆದು  ಪೋಷಕರು ಮತ್ತು ಸಹೋದರರೊಂದಿಗೆ ವಾಸಿಸಲು ಪ್ರಾರಂಭಿಸಿದರು.

ಕೆಲವು ತಿಂಗಳು ಅವರು ಸುರಕ್ಷಿತವಾಗಿದ್ದರು. ಆದರೆ ಆರೋಪಿಗಳು ಡಿಸೆಂಬರ್‌ನಲ್ಲಿ ಅವರು ಇರುವ ಸ್ಥಳವನ್ನು  ಪತ್ತೆ ಮಾಡಿದ್ದಾರೆ. ಅವರು ಬಾಲಕನ ಕುಟುಂಬವನ್ನು ಹೊರಹಾಕಿ ಅವರು ವಾಸಿಸುತ್ತಿದ್ದ ಮನೆಯನ್ನು ಧ್ವಂಸಗೊಳಿಸಿ ಮತ್ತೆ ಅವನನ್ನು ತಮ್ಮೊಡನೆ ಕೊಂಡೊಯ್ದಿದ್ದಾರೆ.ನಂತರ ನಾಲ್ವರು ಶುಭಮ್ ಮತ್ತು ಅವರ ಸ್ನೇಹಿತನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಡಿಸಿಡಬ್ಲ್ಯೂ ಹೇಳಿಕೆ ತಿಳಿಸಿದೆ.. ಗನ್‌ಪಾಯಿಂಟ್‌ನಲ್ಲಿ ಶುಭಮ್ ಅವರ ತಾಯಿಗೆ ಬೆದರಿಕೆ ಹಾಕಲಾಯಿತು, ಎಂದು ಆಯೋಗ ವಿವರಿಸಿದೆ. 

ಎರಡು ದಿನಗಳ ನಂತರ, ಶುಭಮ್ ಮತ್ತು ಅವನ ಸ್ನೇಹಿತ ಮತ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಬಾರಿ ಅವರು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ತಲೆಮರೆಸಿಕೊಂಡಿದ್ದಾಗ ಮರುದಿನ, ವಕೀಲರು ಮಕ್ಕಳನ್ನು ಕಂಡು ಡಿಸಿಡಬ್ಲ್ಯೂಗೆ ಕರೆತಂದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp