ವಾಟ್ಸ್‌ ಆ್ಯಪ್‌ ಹೊಸ ಗೌಪ್ಯತೆ ನೀತಿ ಪ್ರಶ್ನಿಸಿ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶೆ

ವಾಟ್ಸ್‌ಆ್ಯಪ್-ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ-ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಿಂದೆ ಸರಿದಿದೆ.

Published: 15th January 2021 08:33 PM  |   Last Updated: 15th January 2021 08:33 PM   |  A+A-


WhatsApp

ಸಂಗ್ರಹ ಚಿತ್ರ

Posted By : Vishwanath S
Source : UNI

ನವದೆಹಲಿ: ವಾಟ್ಸ್‌ಆ್ಯಪ್-ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ-ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಿಂದೆ ಸರಿದಿದೆ.

ಎರಡು ಸಾಮಾಜಿಕ ಮಾಧ್ಯಮ ದೈತ್ಯರಿಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ತಮ್ಮ ಡೇಟಾವನ್ನು ಹಂಚಿಕೊಳ್ಳಬಾರದು ಎಂದು ಆಕ್ಷೇಪಿಸಿ ವಕೀಲ ಚೈತನ್ಯ ರೋಹಿಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಫೆಬ್ರವರಿ 8, 2021ರಿಂದ ಜಾರಿಗೆ ಬರಲಿರುವ ಹೊಸ ವಾಟ್ಸಾಪ್ ಗೌಪ್ಯತೆ ನೀತಿ ವ್ಯಕ್ತಿಯ ಆನ್‌ಲೈನ್ ಚಟುವಟಿಕೆಯಲ್ಲಿ 360 ಡಿಗ್ರಿ ಪ್ರೊಫೈಲ್ ಅನ್ನು ಬಹಿರಂಗಗೊಳಿಸುತ್ತದೆ ಎಂದು ರೋಹಿಲ್ಲಾ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಖಾಸಗಿ ಘಟಕವಾಗಿದ್ದರೂ ಸಹ ವಾಟ್ಸಾಪ್ ಸಾರ್ವಜನಿಕ ಕಾರ್ಯವನ್ನು ನಿರ್ವಹಿಸುತ್ತಿದೆ. ಚಾಲ್ತಿಯಲ್ಲಿರುವ ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿ, ಮಧ್ಯಸ್ಥಿಕೆಗಳಂತಹ ಗೌಪ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ಕೆಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರವು ವಾಟ್ಸಾಪ್ ಮೂಲಕ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ವಾಟ್ಸಾಪ್ ಅನ್ನು ಬಳಸುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 

ಈಗ ವಾಟ್ಸಾಪ್ ನಮ್ಮ ಗೌಪ್ಯತೆಯ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿದೆ. ಇದು ದೇಶದ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವುದರ ಜೊತೆಗೆ ಬೇರೆ ಯಾವುದಾದರೂ ದೇಶದಲ್ಲಿ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದು, ರವಾನಿಸುವುದು ಮತ್ತು ಸಂಗ್ರಹಿಸುವುದು ಕಾನೂನು ವಿರೋಧಿ ಎಂದು ಆಕ್ಷೇಪಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp