ನಿರ್ಣಾಯಕ  ಪ್ರಸ್ತಾಪಗಳನ್ನು ಮಂಡಿಸಲು ರೈತ ಸಂಘಗಳು ಅನೌಪಚಾರಿಕ ಗುಂಪನ್ನು ರಚಿಸಲಿ: ಕೇಂದ್ರ ಕೃಷಿ ಸಚಿವ ತೋಮರ್

ಮುಂದಿನ  ಸಭೆಯಲ್ಲಿ ಚರ್ಚಿಸಬೇಕಾದ  ನಿರ್ಣಾಯಕ ಪ್ರಸ್ತಾಪಗಳನ್ನು ಸಿದ್ಧಪಡಿಸಲು ರೈತ ಸಂಘಗಳು ತಮ್ಮ ನಡುವೆ ಅನೌಪಚಾರಿಕ ಗುಂಪನ್ನು ರಚಿಸುವಂತೆ ಒತ್ತಾಯಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ನಡೆದ ಒಂಬತ್ತನೇ ಸುತ್ತಿನ ಮಾತುಕತೆಯಲ್ಲಿ ವಿವರವಾದ ಚರ್ಚೆಗಳು ನಡೆದವು ಆದರೆ ನಿರ್ಣಾಯಕ ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ  ಎಂದಿದ್ದಾರೆ.

Published: 15th January 2021 10:16 PM  |   Last Updated: 15th January 2021 10:16 PM   |  A+A-


ನರೇಂದ್ರ ಸಿಂಗ್ ತೋಮರ್

Posted By : Raghavendra Adiga
Source : PTI

ನವದೆಹಲಿ: ಮುಂದಿನ  ಸಭೆಯಲ್ಲಿ ಚರ್ಚಿಸಬೇಕಾದ  ನಿರ್ಣಾಯಕ ಪ್ರಸ್ತಾಪಗಳನ್ನು ಸಿದ್ಧಪಡಿಸಲು ರೈತ ಸಂಘಗಳು ತಮ್ಮ ನಡುವೆ ಅನೌಪಚಾರಿಕ ಗುಂಪನ್ನು ರಚಿಸುವಂತೆ ಒತ್ತಾಯಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ನಡೆದ ಒಂಬತ್ತನೇ ಸುತ್ತಿನ ಮಾತುಕತೆಯಲ್ಲಿ ವಿವರವಾದ ಚರ್ಚೆಗಳು ನಡೆದವು ಆದರೆ ನಿರ್ಣಾಯಕ ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ  ಎಂದಿದ್ದಾರೆ.

ಜನವರಿ 19 ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಸಭೆ ಕರೆಯಲು ಉಭಯ ಪಕ್ಷಗಳು ನಿರ್ಧರಿಸಿದ್ದು ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆ ಮುಗಿದ ನಂತರ ತೋಮರ್ ಸುದ್ದಿಗಾರರಿಗೆ ಸಭೆಯ ವಿವರ ನೀಡಿದ್ದಾರೆ.

"ಸೌಹಾರ್ದಯುತ ವಾತಾವರಣದಲ್ಲಿ ಮೂರು ಕೃಷಿ ಕಾನೂನುಗಳ ಕುರಿತು ಮಾತುಕತೆಗಳು ನಡೆದವು ಮತ್ತು ಕೆಲವು ವಿಷಯಗಳ ಬಗ್ಗೆ ವಿವರವಾದ ಚರ್ಚೆಗಳು ನಡೆದವು, ಆದರೆ ನಿರ್ಣಾಯಕ ಹಂತವನ್ನು ತಲುಪಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

"ಅವರು ಅನೌಪಚಾರಿಕ ಗುಂಪನ್ನು ರಚಿಸಿಕೊಳ್ಳಬಹುದು.ಆ ಮೂಲಕ ಕಾನೂನುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಕೆಲವು ದೃ ಢ  ವಾದ ಪ್ರಸ್ತಾಪಗಳನ್ನು ಸಿದ್ಧಪಡಿಸಬಹುದು, ರೈತರ ನಿರೀಕ್ಷೆಗಳು ಯಾವುವು ಮತ್ತು ಅವರಿಗೆ ಯಾವ ಷರತ್ತುಗಳು ಸಮಸ್ಯೆಯಾಗಿದೆಎಂಬುದನ್ನು ವಿವರಿಸಲು ಇದರಿಂದ ಸಾಧ್ಯವಾಗಲಿದೆ. ಇದನ್ನು ಸರ್ಕಾರವು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತದೆ: ಸಚಿವರು ಹೇಳಿದರು. ಜನವರಿ 19 ರಂದು ನಡೆಯುವ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಚರ್ಚೆಗಳು ಕೆಲವು ನಿರ್ಣಾಯಕ ಹಂತವನ್ನು ತಲುಪುವ ಭರವಸೆ ಇದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ನೇಮಿಸಿದರೂ ಸರ್ಕಾರ ಮತ್ತು ರೈತರ ನಡುವಿನ ನೇರ ಮಾತುಕತೆ ಮುಂದುವರೆದಿದ್ದು, ಎಲ್ಲರೂ ಸುಪ್ರೀಂ ಕೋರ್ಟ್‌ಗೆ ಸಂಪೂರ್ಣ ಬದ್ಧರಾಗಿದ್ದಾರೆ ಮತ್ತು ಸಮಿತಿ ಆಹ್ವಾನ ನೀಡಿದಾಗ ಸರ್ಕಾರ ಅದರ ಮುಂದೆ ತನ್ನ ನಿಲುವನ್ನು ಮಂಡಿಸಲಿದೆ ಎಂದು ತೋಮರ್ ಹೇಳಿದರು.

"ರೈತಸಂಘಗಳು ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಲು ಬಯಸುತ್ತವೆ ಮತ್ತು ನಮಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ" ಎಂದು ಅವರು ಹೇಳಿದರು. ಸರ್ಕಾರ-ರೈತರ ಮಾತುಕತೆ ಮತ್ತು ಸುಪ್ರೀಂ ಕೋರ್ಟ್ ಸಮಿತಿಯ ಚರ್ಚೆಗಳಿಂದ ಪರಿಹಾರ  ಸಿಕ್ಕಬಹುದು ಎಂದು ಸಚಿವರು ಹೇಳಿದರು. "ನಮ್ಮ ಪ್ರಯತ್ನವು ಸಂವಾದದ ಮೂಲಕ ಸಮಸ್ಯೆಯನ್ನು ಪರಿಹರಿಸುವುದು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಗೂ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಬೇಗನೆ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.

ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ ನಾಯಕ ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಮಾತನಾಡಿದ ಸಚಿವರು , "ರಾಹುಲ್ ಗಾಂಧಿಯವರ ಹೇಳಿಕೆಗಳು ಮತ್ತು ಉಪಕ್ರಮಗಳು ಅವರದೇ ಪಕ್ಷದವರಲ್ಲಿ ನಗು ತರಿಸಿದೆ" ಎಂದರು.

"2019 ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದೇ ಕೃಷಿ ಸುಧಾರಣೆಗಳ ಪ್ರಸ್ತಾಪವಿತ್ತು, ಆದ ಕಾರಣ  ಆದ್ದರಿಂದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಆ ಸಮಯದಲ್ಲಿ ಸುಳ್ಳು ಹೇಳಿದ್ದರೋ ಅಥವಾ ಈಗ ಸುಳ್ಳು ಹೇಳುತ್ತಿದ್ದಾರೆಯೆ ಎನ್ನುವುದು ನಮಗೆ ತಿಳಿಸಬೇಕು: ಸಚಿವರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp