ಸಂಕ್ರಾಂತಿ ಆಚರಣೆ ಸಂದರ್ಭದಲ್ಲಿ ಬಿಹಾರದಲ್ಲಿ ರಾಜಕೀಯ ಸಂಕ್ರಮಣ?!

ಮಕರ ಸಂಕ್ರಮಣದ ಕಾಲದಲ್ಲೇ ಬಿಹಾರದಲ್ಲಿ ರಾಜಕೀಯ ಸಂಕ್ರಮಣದ ಲಕ್ಷಣಗಳೂ ಗೋಚರಿಸುತ್ತಿವೆ. 

Published: 15th January 2021 03:35 PM  |   Last Updated: 15th January 2021 04:48 PM   |  A+A-


JD-U to RJD: Cross-defection fears drive Bihar's political parties into a frenzy

ನಿತೀಶ್ ಕುಮಾರ್- ಲಾಲು ಪ್ರಸಾದ್ ಯಾದವ್

Posted By : Srinivas Rao BV
Source : The New Indian Express

ಪಾಟ್ನಾ: ಮಕರ ಸಂಕ್ರಮಣದ ಕಾಲದಲ್ಲೇ ಬಿಹಾರದಲ್ಲಿ ರಾಜಕೀಯ ಸಂಕ್ರಮಣದ ಲಕ್ಷಣಗಳೂ ಗೋಚರಿಸುತ್ತಿವೆ. 

ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರದ ಭೀತಿ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ಅಧ್ಯಕ್ಷ ಉಮೇಶ್ ಕುಶ್ವಾಹ ಜೆಡಿಯು ನೇತೃತ್ವದ ಮಹಾಮೈತ್ರಿಯಲ್ಲಿ ಬಿರುಕುಂಟಾಗಲಿದೆ ಎಂದು ಹೇಳಿದ್ದರು.

ಇದೇ ವೇಳೆ ಕಾಂಗ್ರೆಸ್ ನ ಮಾಜಿ ಶಾಸಕ ಭರತ್ ಸಿಂಗ್, ಇತ್ತೀಚೆಗಷ್ಟೇ 19 ಶಾಸಕರ ಪೈಕಿ 11 ಶಾಸಕರು ಬಿಜೆಪಿ ಸೇರ್ಪಡೆಯಾಗಲು ಸಿದ್ಧರಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೇ ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಈ ವದಂತಿಗಳನ್ನು ನಿರಾಕರಿಸಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಆದರೆ ಆಡಳಿತಾರೂಢ ಪಕ್ಷದಿಂದಲೇ ಹಲವು ಮಂದಿ ಶಾಸಕರು ಆರ್ ಜೆಡಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಆರ್ ಜೆಡಿಯ ಮತ್ತೋರ್ವ ನಾಯಕ ಶ್ಯಾಮ್ ರಜಾಕ್ ಆಡಳಿತಾರೂಢ ಪಕ್ಷದ 17 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದು, ಆರ್ ಜೆಡಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಾಂಬ್ ಸಿಡಿಸಿದ್ದಾರೆ.

ಬಿಹಾರದಲ್ಲಿ ಜೆಡಿಯು ಪಕ್ಷದ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ರಚನೆ ಮಾಡಿದ್ದು, ಇತರ ಎರಡು ಮಿತ್ರಪಕ್ಷಗಳ ನೆರವಿನಿಂದ ಮೈತ್ರಿ ಸರ್ಕಾರ ನಡೆಯುತ್ತಿದೆ. ಶಾಸಕರ ಪಕ್ಷಾಂತರ ವದಂತಿಗಳು ಎನ್ ಡಿಎ ಹಾಗೂ ವಿಪಕ್ಷಗಳಲ್ಲಿ ಆತಂಕ ಮೂಡಿಸಿದೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp