ಪಕ್ಷ ತೊರೆಯುವ ಸುಳಿವು ನೀಡಿದ ಟಿಎಂಸಿ ಸಂಸದೆ ಸತಾಬ್ಡಿ ರಾಯ್, ಶನಿವಾರ ನಿರ್ಧಾರ ಪ್ರಕಟ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿರ್ಭುಮ್ ಸಂಸದೆ ಸತಾಬ್ಡಿ ರಾಯ್ ಅವರು ಆಡಳಿತ ಪಕ್ಷ ತೊರೆಯುವ ಸುಳಿವು ನೀಡಿದ್ದು, ಈ ಬಗ್ಗೆ ಶನಿವಾರ "ನಿರ್ಧಾರ" ತೆಗೆದುಕೊಳ್ಳುವುದಾಗಿ ಸೋಮವಾರ ಹೇಳಿದ್ದಾರೆ.
Published: 15th January 2021 03:22 PM | Last Updated: 15th January 2021 03:37 PM | A+A A-

ಸತಾಬ್ದಿ ರಾಯ್
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿರ್ಭುಮ್ ಸಂಸದೆ ಸತಾಬ್ಡಿ ರಾಯ್ ಅವರು ಆಡಳಿತ ಪಕ್ಷ ತೊರೆಯುವ ಸುಳಿವು ನೀಡಿದ್ದು, ಈ ಬಗ್ಗೆ ಶನಿವಾರ "ನಿರ್ಧಾರ" ತೆಗೆದುಕೊಳ್ಳುವುದಾಗಿ ಶುಕ್ರವಾರ ಹೇಳಿದ್ದಾರೆ.
ಫೇಸ್ಬುಕ್ ನಲ್ಲಿ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟಿ ಹಾಗೂ ರಾಜಕಾರಣಿ ಸತಾಬ್ದಿ ಅವರು, ತನ್ನ ಕ್ಷೇತ್ರದಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನನಗೇ ಮಾಹಿತಿ ನೀಡುತ್ತಿಲ್ಲ. ಇದು ನನಗೆ "ಮಾನಸಿಕ ನೋವು" ಉಂಟುಮಾಡಿದೆ ಎಂದು ಹೇಳಿದ್ದಾರೆ.
ಮೂರು ಬಾರಿ ಬಿರ್ಭುಮ್ ಸಂಸದರಾಗಿರುವ ನಟಿ, ತಮ್ಮ ಮುಂದಿನ ನಡೆ ಬಗ್ಗೆ ಯಾವುದೇ "ನಿರ್ಧಾರ" ತೆಗೆದುಕೊಂಡರೂ ಅದನ್ನು ಶನಿವಾರ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ರಾಯ್ ಅವರ ಈ ಫೋಸ್ ಬುಕ್ ಪೋಸ್ಟ್ ಟಿಎಂಸಿಯಲ್ಲಿ ತಲ್ಲಣ ಸೃಷ್ಟಿಸಿದೆ ಮತ್ತು ಪಕ್ಷ ಅವರನ್ನು ಭೇಟಿ ಮಾಡುವ ಭರವಸೆ ನೀಡಿದೆ.
ಪಕ್ಷದ ಮೂಲಗಳ ಪ್ರಕಾರ, ರಾಯ್ ಅವರು ಬಿರ್ಭಮ್ ಜಿಲ್ಲಾ ಟಿಎಂಸಿ ಮುಖ್ಯಸ್ಥ ಅನುಬ್ರತಾ ಮೊಂಡಾಲ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
"ಈ ಕ್ಷೇತ್ರದೊಂದಿಗೆ ನನಗೆ ನಿಕಟ ಸಂಪರ್ಕವಿದೆ. ಆದರೆ ಇತ್ತೀಚೆಗೆ ಹಲವಾರು ಪಕ್ಷದ ಕಾರ್ಯಕ್ರಮಗಳಿಂದ ನನ್ನನ್ನು ಏಕೆ ದೂರವಿಡಲಾಗುತ್ತಿದೆ ಎಂದು ಅನೇಕರು ನನ್ನನ್ನು ಕೇಳುತ್ತಿದ್ದಾರೆ ಎಂದು ರಾಯ್ ಹೇಳಿದ್ದಾರೆ.