ಗೋವಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್: ಉಪ ರಾಷ್ಟ್ರಪತಿ ಭೇಟಿ, ಆರೋಗ್ಯ ವಿಚಾರಿಸಿದ ಪ್ರಧಾನಿ
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಶುಕ್ರವಾರ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
Published: 15th January 2021 01:12 PM | Last Updated: 15th January 2021 01:51 PM | A+A A-

ಇಂದು ಗೋವಾ ಮೆಡಿಕಲ್ ಕಾಲೇಜಿಗೆ ಆಗಮಿಸಿ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ವಿಚಾರಿಸಿದ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
ಪಣಜಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಶುಕ್ರವಾರ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಶ್ರೀಪಾದ್ ನಾಯಕ್ ಅವರು ಅಪಾಯದಿಂದ ಪಾರಾಗಿದ್ದು ಅವರ ದೇಹದ ಪ್ರಮುಖ ಅಂಗಾಂಗಗಳು ಸಹಜವಾಗಿ ಕೆಲಸ ಮಾಡುತ್ತಿವೆ ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಇಂದು ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಚಿವ ಶ್ರೀಪಾದ್ ನಾಯಕ್ ಅವರ ವಿಶೇಷಾಧಿಕಾರಿ ಸೂರಜ್ ನಾಯಕ್ ಅವರಿಗೆ ಕರೆ ಮಾಡಿ ಅವರ ಆರೋಗ್ಯ ಚೇತರಿಕೆ ಬಗ್ಗೆ ವಿಚಾರಿಸಿದ್ದಾರೆ.
Vice President M Venkaiah Naidu visited Goa Medical College and met Union Minister Shripad Naik who is undergoing treatment following injuries in a road accident.
— ANI (@ANI) January 15, 2021
"Doctors also informed that Naik was out of danger and that his vital parameters were normal," Naidu tweets. pic.twitter.com/T4vSZHA1ni