ಹಾರ್ವರ್ಡ್ ವಿವಿಯಲ್ಲಿ ಪ್ರೊಫೆಸರ್ ಹುದ್ದೆ ನೀಡುವುದಾಗಿ ಎನ್‌ಡಿಟಿವಿ ಮಾಜಿ ಉದ್ಯೋಗಿ ನಿಧಿ ರಜ್ದಾನ್ ಗೆ ವಂಚನೆ: ದೂರು ದಾಖಲು

ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಹುದ್ದೆ ಸಿಕ್ಕಿದ್ದ ಕಾರಣ ಕಳೆದ ವರ್ಷ ಎನ್‌ಡಿಟಿವಿ ತೊರೆದಿದ್ದ ಪತ್ರಕರ್ತೆ ನಿಧಿ ರಜ್ದಾನ್ ತಾನೊಂದು ಬೃಹತ್ ಮೋಸದ ಜಾಲಕ್ಕೆ ಬಲಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಪ್ರಾದ್ಯಾಪಕಿ ಹುದ್ದೆ ನೀಡುವುದಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದ ಹೆಸರು ಹೇಳಿ ವಂಚಿಸಲಾಗಿದೆ ಎಂದು ದೂರಿದ್ದಾರೆ.

Published: 15th January 2021 08:50 PM  |   Last Updated: 15th January 2021 09:27 PM   |  A+A-


ನಿಧಿ ರಜ್ದಾನ್

Posted By : Raghavendra Adiga
Source : The New Indian Express

ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಹುದ್ದೆ ಸಿಕ್ಕಿದ್ದ ಕಾರಣ ಕಳೆದ ವರ್ಷ ಎನ್‌ಡಿಟಿವಿ ತೊರೆದಿದ್ದ ಪತ್ರಕರ್ತೆ ನಿಧಿ ರಜ್ದಾನ್ ತಾನೊಂದು ಬೃಹತ್ ಮೋಸದ ಜಾಲಕ್ಕೆ ಬಲಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಪ್ರಾದ್ಯಾಪಕಿ ಹುದ್ದೆ ನೀಡುವುದಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದ ಹೆಸರು ಹೇಳಿ ವಂಚಿಸಲಾಗಿದೆ ಎಂದು ದೂರಿದ್ದಾರೆ.

'ಲೆಫ್ಟ್, ರೈಟ್ ಆಂಡ್ ಸೆಂಟರ್' ಕಾರ್ಯಕ್ರಮದ ಆಯೋಜಕಿಯಾಗಿದ್ದ  ಮಾಜಿ ಎನ್‌ಡಿಟಿವಿ ಆಂಕರ್ ನಿಧಿ  ಟ್ವಿಟರ್‌ನಲ್ಲಿ ನೀಡಿದ ಹೇಳಿಕೆಯಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ  ಪತ್ರಿಕೋದ್ಯಮದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ನಿಮಗೆ ಅವಕಾಶ ನಿಡುತ್ತೇವೆಂದು ಕಳೆದ ವರ್ಷ ಜೂನ್ ನಲ್ಲಿ ನನಗೆ ಇ-ಮೇಲ್ ಮೂಲಕ ತಿಳಿಸಲಾಗಿತ್ತು, ಹಾರ್ವರ್ಡ್ ವಿಶ್ವವಿದ್ಯಾಲಯದವರೇ ಇದನ್ನಿ ಕಳಿಸಿದ್ದಾರೆಂದು ನಂಬಿದ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಾಜೀನಾಮೆ ನೀಡಿ ಇ-ಮೇಲ್ ಕಳಿಸಿದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ.

ಆದರೆ ದುಷ್ಕರ್ಮಿಗಳು ವಿಶ್ವವಿದ್ಯಾನಿಲಯದ ಹೆಸರಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿದ್ದರು. ಅದರಂತೆ ಸೆಪ್ಟೆಂಬರ್ 2020ರಲ್ಲಿ ನಿಧಿ ಹಾರ್ವರ್ಡ್ ವಿವಿಗೆ ದಾಖಲಾಗಲು ಸೂಚಿಸಲಾಗಿ್ತ್ತು. ಆದರೆ ಮತ್ತೆ ಕೊರೋನಾ ಕಾರಣ ನೀಡಿ ತರಗತಿಗಳು ಜನವರಿ 2021ರಿಂದ ಪ್ರಾರಂಬವಾಗುತ್ತದೆ ಎಂದು ಹೇಳಲಾಗಿತ್ತು.

ಇದೀಗ ಮತ್ತೆ ಈ ಬಗ್ಗೆ ವಿಚಾರಿಸಿದಾಗ ತರಗತಿ ಪ್ರಾರಂಭವಾಗುವುದು ಇನ್ನೂ ತುಸು ವಿಳಂಬವಾಗುತ್ತದೆ ಎಂದು ಉತ್ತರ ಸಿಕ್ಕಿದೆ. ಈ ಬಗ್ಗೆ ಸಂದೇಹಗೊಂಡ ನಿಧಿ ನೇರವಾಗಿ ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳನು ಸಂಪರ್ಕಿಸಿದಾಗ ಅವರಿಗೆ ಸತ್ಯ ಅರಿವಾಗಿದ್ದು ವಿವಿ ಅಂತಹಾ ಯಾವುದೇ ಆಫರ್ ನಿಡಿಲ್ಲ ಎಂದು ಖಚಿತವಾಗಿದೆ. ಮಾತ್ರವಲ್ಲದೆ ದುಷ್ಲರ್ಮಿಗಳು ನಿಧಿಯವರ ಖಸಗಿ ಮಾಹಿತಿಯನ್ನೂ ಕಳವು ಮಾಡಿದ್ದಾಗಿ ತಿಳಿದುಬಂದಿದೆ.

 

 

ಈ ಬಗೆ ನಿಧಿ ಅವರೀಗ ಪೋಲೀಸರಲ್ಲಿ ದೂರು ದಾಖಲಿಸಿದ್ದಾರೆ. "ದುಷ್ಕರ್ಮಿಗಳು ನನ್ನ ವೈಯಕ್ತಿಕ ಡೇಟಾ ಮತ್ತು ಸಂವಹನಗಳಿಗೆ ಪ್ರವೇಶವನ್ನು ಪಡೆಯಲು ನಕಲಿ ಮತ್ತು ತಪ್ಪಾದ  ನಿರೂಪಣೆಗಳನ್ನು ಬಳಸಿದ್ದಾರೆ ಮತ್ತು ನನ್ನ  ಇಮೇಲ್ / ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪ್ರವೇಶವನ್ನು ಪಡೆದಿರುವ ಸಾಹ್ಯತೆಯೂ ಇದೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಮತ್ತು ಅವರಿಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಒದಗಿಸಿದೆ. ಈ ವಂಚನೆ ನಡೆಸಿದ ದುಷ್ಕರ್ಮಿಗಳನ್ನು ಗುರುತಿಸಲು, ಬಂಧಿಸಲು ಮತ್ತು ಕಾನೂನು ಕ್ರಮ ಜರುಗಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಅವರನ್ನು ವಿನಂತಿಸಿದ್ದೇನೆ. ಪ್ರತ್ಯೇಕವಾಗಿ ನಾನು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಮತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದೇನೆ" ನಿಧಿ ಟ್ವೀಟ್ ನಲ್ಲಿ ಹೇಳಿದ್ದಾರೆ. 

 

 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp