
ಪ್ರತ್ಯಕ್ಷ ದೃಶ್ಯ
ಅಹಮದಾಬಾದ್: ಮಾಸ್ಕ್ ಹಾಕದಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಪೊಲೀಸ್ ಪೇದೆ ಕಪಾಳಕ್ಕೆ ಹೊಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಘಟನೆ ಸಂಬಂಧ ನವರಂಗಪುರ ಪೊಲೀಸರ ಮುಖ್ಯ ಕಾನ್ಸ್ಟೆಬಲ್ ನನ್ನು ಅಮಾನತುಗೊಳಿಸಲಾಗಿದೆ. ಮಾಸ್ಕ್ ಧರಿಸದ ಕಾರಣ ನವರಂಗ್ಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವ್ಯಕ್ತಿಯೋರ್ವನನ್ನು ಪೊಲೀಸ್ ಪೇದೆಗಳು ವಾಹನದಲ್ಲಿ ಕೂರಿಸಲು ಮುಂದಾಗಿದ್ದರು. ಈ ವೇಳೆ ಆತನೊಂದಿಗಿದ್ದ ಇಬ್ಬರು ಮಹಿಳೆಯರು ಪೊಲೀಸ್ ಕ್ರಮಗಳನ್ನು ಪ್ರತಿಭಟಿಸಲು ಪ್ರಾರಂಭಿಸಿದರು.
ಇಬ್ಬರು ಮಹಿಳೆಯರು ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದಾಗ, ವಿಕ್ರಮಸಿಂಹ ದರ್ಬಾರ್ ಎಂದು ಗುರುತಿಸಲ್ಪಟ್ಟ ಹೆಡ್ ಕಾನ್ಸ್ಟೆಬಲ್ ಇಬ್ಬರ ಪೈಕಿ ಒಬ್ಬರಿಗೆ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗಿದ್ದು ವಿಡಿಯೋದಲ್ಲಿ ಪೋಲೀಸ್ ತನ್ನೊಂದಿಗೆ ಮಹಿಳೆಯರು ವಾದಿಸುತ್ತಿರುವ ಚಿತ್ರೀಕರಣವನ್ನೂ ನೋಡಿದ್ದಾರೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ಜೋರಾಗಿ ಕಿರುಚಿದಾಗ, ಪೇದೆ ಆಕೆಗೆ ಕಪಾಳಮೋಕ್ಷ ಮಾಡಿ ಅವಳ ತಲೆಗೆ ಹೊಡೆದಿರುವುದು ಕಂಡುಬಂದಿದೆ.