ದೆಹಲಿಯಲ್ಲಿ ಕೋವಿಶೀಲ್ಡ್ ಗೆ ಆದ್ಯತೆ ನೀಡಿದರೆ, ತಮಿಳುನಾಡಿನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಗೆ ಬೇಡಿಕೆ

ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. 

Published: 16th January 2021 06:05 PM  |   Last Updated: 16th January 2021 07:24 PM   |  A+A-


Covaxin being administered to recipients at the Rajiv Gandhi Government General Hospital in Chennai. (Photo | Ashwin Prasath)

ದೆಹಲಿಯಲ್ಲಿ ಕೋವಿಶೀಲ್ಡ್ ಗೆ ಆದ್ಯತೆ ನೀಡಿದರೆ, ತಮಿಳುನಾಡಿನಲ್ಲಿ ಕೋವ್ಯಾಕ್ಸೀನ್ ಗೆ

Posted By : Srinivas Rao BV
Source : The New Indian Express

ಚೆನ್ನೈ: ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. 

ಇತ್ತ ಚೆನ್ನೈ ನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಗೆ ಹೆಚ್ಚಿನ ಬೇಡಿಕೆ ಇದೆ. 

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ನಿರ್ದೇಶಕ, ಡಾ. ಮನೋಜ್ ಮುರ್ಹಿಕರ್ ಸಹ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿದ್ದಾರೆ. ಅವರಷ್ಟೇ ಅಲ್ಲದೇ ಅವರ ತಂಡದ ಸದಸ್ಯರೂ ಆಗಿರುವ ಆರ್ ಜಿಜಿಜಿಹೆಚ್ ನ ಡೀನ್ ಡಾ.ಇ ಥೆರಣಿರಾಜನ್ ಸಹ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿದ್ದಾರೆ. ಕೋವ್ಯಾಕ್ಸಿನ್ ನ 3 ನೇ ಹಂತದ ಟ್ರಯಲ್ ಗಳು ನಡೆಯುತ್ತಿದ್ದಾಗಲೇ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು.

ಲಸಿಕೆ ಪಡೆದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಡಾ. ಮನೋಜ್ ಮುರ್ಹಿಕರ್ ಕೋವ್ಯಾಕ್ಸಿನ್ ನ 2 ನೇ ಹಂತದ ಟ್ರಯಲ್ ಗಳಲ್ಲಿ ಇದು ಅತ್ಯುತ್ತಮ ಪ್ರತಿಕಾಯಗಳನ್ನು ಸೃಷ್ಟಿಸುವುದು ಸ್ಪಷ್ಟವಾಗಿದೆ ಅಷ್ಟೇ ಅಲ್ಲದೇ ಟಿ-ಸೆಲ್ ಪ್ರತಿಕ್ರಿಯೆಗಳೂ ಸಹ ಉತ್ತಮವಾಗಿದೆ, ಮೂರನೇ ಹಂತದ ಟ್ರಯಲ್ ಗಳ ಫಲಿತಾಂಶವಷ್ಟೇ ನಿರೀಕ್ಷಣೆಯಲ್ಲಿದೆ. ಕೆಲವೇ ವಾರದಲ್ಲಿ ಬರಲಿದೆ, ಕೋವ್ಯಾಕ್ಸಿನ್ ಸುರಕ್ಷಿತವಾದ ಲಸಿಕೆಯಾಗಿದೆ ಎಂದು ಹೇಳಿದ್ದಾರೆ. 

ಕೋವಿಶೀಲ್ಡ್ ಸಹ ಉತ್ತಮವಾಗಿದೆ, ಆದರೆ ಕೋವ್ಯಾಕ್ಸಿನ್ ಸಹ ಸುರಕ್ಷಿತವಾಗಿದೆ ಎಂಬುದನ್ನು ಜನತೆಗೆ ತಿಳಿಸಬೇಕಿದೆ ಎಂದು ಡಾ. ಮುರ್ಹಿಕರ್ ಹೇಳಿದ್ದಾರೆ.

ತಮಿಳುನಾಡು 5,36,500 ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆ ಪಡೆದಿದ್ದು, 20,000 ಡೋಸ್ ಗಳಷ್ಟು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿವೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp