ಪತ್ನಿಯ ಕೈ-ಕಾಲು ಕಟ್ಟಿ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರಗೈದ ಪತಿ!

ಪತ್ನಿಯ ಕೈ-ಕಾಲು ಕಟ್ಟಿದ ನಂತರ ಸರತಿಯಂತೆ ಸ್ನೇಹಿತರ ಜೊತೆಗೂಡಿ ಪತಿಯೂ ಸಾಮೂಹಿಕ ಅತ್ಯಾಚಾರ ನಡೆಸಿರುವ ನೀಚ ಕೃತ್ಯ ವರದಿಯಾಗಿದೆ.

Published: 16th January 2021 03:47 PM  |   Last Updated: 16th January 2021 03:47 PM   |  A+A-


Puttur Gang Rape Case: Three More Accused Arrested

ಸಾಂದರ್ಭಿಕ ಚಿತ್ರ

Posted By : Vishwanath S
Source : Online Desk

ಜೈಪುರ: ಪತ್ನಿಯ ಕೈ-ಕಾಲು ಕಟ್ಟಿದ ನಂತರ ಸರತಿಯಂತೆ ಸ್ನೇಹಿತರ ಜೊತೆಗೂಡಿ ಪತಿಯೂ ಸಾಮೂಹಿಕ ಅತ್ಯಾಚಾರ ನಡೆಸಿರುವ ನೀಚ ಕೃತ್ಯ ವರದಿಯಾಗಿದೆ. 

ರಾಜಸ್ತಾನದ ಜಲೌರ್ ನಲ್ಲಿ ಈ ಘಟನೆ ನಡೆದಿದೆ. ಪತ್ನಿ ಮತ್ತು ಮೂರು ಮಕ್ಕಳ ಜೊತೆ ಸಿರೋಹಿಯಲ್ಲಿ ವಾಸವಾಗಿದ್ದ ಆರೋಪಿತ ಪತಿ ತನ್ನ ಪತ್ನಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ.

ಜನವರಿ 12ರಂದು ಮನೆಗೆ ಬಂದ ಸಂತ್ರಸ್ತ ಮಹಿಳೆಯ ಪತಿ ಆಕೆಯನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅದಾಗಲೇ ಪತಿಯ ಸ್ನೇಹಿತರಾದ ಅರ್ಜುನ್ ಸಿಂಗ್, ಸಿ ರಾಮ್, ನಾರಾಯಣ್ ಕುಡಿದು ಟೈಟಾಗಿದ್ದರು. 

ಸ್ನೇಹಿತನ ಪತ್ನಿಯನ್ನು ಕಂಡ ಕಾಮುಕರು ಆಕೆಯ ಕೈ-ಕಾಲುಗಳನ್ನು ಕಟ್ಟಿ ಪತಿಯ ಮುಂದೆ ಅತ್ಯಾಚಾರಗೈದಿದ್ದಾರೆ. ನಂತರ ಸರದಿಯಂತೆ ಪತಿಯೂ ಸಹ ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. 

ಇದರಿಂದ ನೊಂದ ಮಹಿಳೆ ಮಾರನೇ ದಿನ ತವರು ಮನೆಗೆ ಬಂದು ತಾಯಿಗೆ ನಡೆದ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಕೂಡಲೇ ಸಂತ್ರಸ್ತೆಯ ತಾಯಿ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ.

100%

 

ಅತ್ಯಾಚಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಸದ್ಯ ಘಟನೆ ಬಳಿಕ ನಾಲ್ವರು ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp