ಕೋವಿಶೀಲ್ಡ್ ಕೊರೋನಾ ಲಸಿಕೆ ಪಡೆದ ಸೇರಮ್ ಇನ್ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲ

ಕೊರೋನಾ ಲಸಿಕೆ ತಯಾರಿಸುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಕೊರೋನಾ ಲಸಿಕೆಯನ್ನು ಪಡೆದಿದ್ದಾರೆ.

Published: 16th January 2021 03:45 PM  |   Last Updated: 16th January 2021 04:16 PM   |  A+A-


Serum Institute's Adar Poonawalla receives Covishield shot

ಕೊರೋನಾ ಲಸಿಕೆ ಪಡೆದ ಸೇರಮ್ ಇನ್ಸ್ಟಿಟ್ಯೂಟ್ ನ ಅದಾರ್ ಪೂನಾವಾಲ

Posted By : Srinivas Rao BV
Source : Online Desk

ಪುಣೆ: ಕೊರೋನಾ ಲಸಿಕೆ ತಯಾರಿಸುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಕೊರೋನಾ ಲಸಿಕೆಯನ್ನು ಪಡೆದಿದ್ದಾರೆ.

ಇದೇ ವೇಳೆ ಲಸಿಕೆ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮಗಳು ಯಶಸ್ವಿಯಾಗಲಿ ಎಂದು ಅದಾರ್ ಪೂನಾವಾಲ ಶುಭಕೋರಿದ್ದಾರೆ.

"ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಶಸ್ಸು ಲಭಿಸಲಿ ಎಂದು ಕೋರುತ್ತೇನೆ, ಸೆರಮ್ ಇನ್ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಈ ಐತಿಹಾಸಿಕ ಶ್ರಮದ ಭಾಗವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ, ನಾನೂ ಸಹ ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಅದಾರ್ ಪೂನಾವಾಲ ತಿಳಿಸಿದ್ದಾರೆ.

ಆಸ್ಟ್ರಾಜೆನಿಕಾ ಹಾಗೂ ಆಕ್ಸ್ಫರ್ಡ್ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ. ಹೈದರಾಬಾದ್ ಮೂಲದ ಮತ್ತೊಂದು ಲಸಿಕೆ ಕೋವಾಕ್ಸಿನ್ ಗೂ ಭಾರತ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp