ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ದೆಹಲಿ ವೈದ್ಯರ ಆದ್ಯತೆ!

ಕೋವಿಡ್-19 ಗೆ ಲಸಿಕೆ ನೀಡುವ ಅಭಿಯಾನ ಜ.16 ರಿಂದ ಪ್ರಾರಂಭವಾಗಿದ್ದು, ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. 

Published: 16th January 2021 05:22 PM  |   Last Updated: 16th January 2021 06:45 PM   |  A+A-


Covid-19_Vaccine1

ಕೋವಿಡ್-19 ಲಸಿಕೆ

Posted By : Srinivas Rao BV
Source : PTI

ನವದೆಹಲಿ: ಕೋವಿಡ್-19 ಗೆ ಲಸಿಕೆ ನೀಡುವ ಅಭಿಯಾನ ಜ.16 ರಿಂದ ಪ್ರಾರಂಭವಾಗಿದ್ದು, ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. 

ಈ ನಡುವೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸೀನ್ ಬದಲಿಗೆ ಕೋವಿಶೀಲ್ಡ್ ನ್ನು ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. 

ವೈದ್ಯಕೀಯ ಅಧೀಕ್ಷಕರಿಗೆ ವೈದ್ಯಕೀಯ ತಂಡ ಪತ್ರ ಬರೆದಿದ್ದು, ಕೋವ್ಯಾಕ್ಸೀನ್ ಬಗ್ಗೆ ದೇಶದ ಜನರಿಗೆ ಭಯ-ಭೀತಿಗಳಿವೆ, ಆದ್ದರಿಂದ ಲಸಿಕೆ ನೀಡುವ ಅತಿ ದೊಡ್ಡ ಅಭಿಯಾನದಲ್ಲಿ ಭಾಗವಹಿಸದೇ ಇರುವ ಸಾಧ್ಯತೆಗಳೂ ಇವೆ. ಒಂದು ವೇಳೆ ಹೀಗಾದಲ್ಲಿ ಅಭಿಯಾನದ ಉದ್ದೇಶವೇ ಈಡೇರದೇ ಹೋಗಬಹುದು ಎಂದು ವೈದ್ಯರ ತಂಡ ಆತಂಕ ವ್ಯಕ್ತಪಡಿಸಿದೆ.

ನಮ್ಮ ಆಸ್ಪತ್ರೆಯಲ್ಲಿ ಜನರು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ನ್ನು ಆದ್ಯತೆಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಜನರಲ್ಲಿ ಇದನ್ನು ಬಳಕೆ ಮಾಡುವುದರ ಬಗ್ಗೆ ಆತಂಕವಿದೆ. ಆದ್ದರಿಂದ ಎಲ್ಲಾ ಟ್ರಯಲ್ ಗಳನ್ನೂ ಪೂರೈಸಿರುವ ಕೋವಿಶೀಲ್ಡ್ ನ್ನೇ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದು ಆರ್ ಎಂಎಲ್ ವೈದ್ಯರ ತಂಡ ಬರೆದ ಪತ್ರದಲ್ಲಿ ತಿಳಿಸಲಾಗಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp