ಕೋವಿಡ್-19: ಭಾರತದಲ್ಲಿಂದು 15,144 ಹೊಸ ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2.08ಲಕ್ಷಕ್ಕೆ ಇಳಿಕೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,144 ಹೊಸ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 2,08,826 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Published: 17th January 2021 10:07 AM | Last Updated: 17th January 2021 10:07 AM | A+A A-

ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,144 ಹೊಸ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 2,08,826 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹಲವು ದಿನಗಳಿಂದ ದೇಶದಲ್ಲಿ ಹೊಸದಾಗಿ ಧೃಢಪಟ್ಟ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.
ಹೊಸ ಪ್ರಕರಣಗಳನ್ನು ಮೀರಿ ಚೇತರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತು ದೈನಂದಿನ ಸಾವಿನ ಪ್ರಮಾಣ ಇಳಿಕೆಯಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಕಂಡುಬರುತ್ತಿದೆ.
ಕಳೆದ 24 ಗಂಟೆಗಳಲ್ಲಿ 17,170 ಮಂದಿ ಸೋಂಕಿನಿಂದ ಚೇತರಿಸಿಕೊಳ್ಳುವುದರೊಂದಿಗೆ ಒಟ್ಟು ಸೋಂಕಿತರ 1,05,57,985ಕ್ಕೆ ಏರಿಕೆಯಾಗಿದೆ.
India reports 15,144 new #COVID19 cases, 17,170 discharges and 181 deaths in last 24 hours, as per Union Health Ministry
— ANI (@ANI) January 17, 2021
Total cases: 1,05,57,985
Active cases: 2,08,826
Total discharges: 1,01,96,885
Death toll: 1,52,274 pic.twitter.com/vlWULCm4Ul
ಕಳೆದ 24 ಗಂಟೆಗಳಲ್ಲಿ ಹೊಸ 15,144 ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 17,170 ಮಂದಿ ಚೇತರಿಸಿಕೊಂಡಿದ್ದಾರೆ.
ಚೇತರಿಕೆ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಭಾನುವಾರ ಚೇತರಿಕೆ ಶೇ 96.16 ಕ್ಕೆ ಏರಿದೆ. ದೇಶದಲ್ಲಿ ಸದ್ಯ ಚೇತರಿಕೆ ಕಂಡ ಒಟ್ಟು ಪ್ರಕರಣಗಳ ಸಂಖ್ಯೆ 1,01,96,885ರಷ್ಟಿದೆ.
ಈ ನಡುವೆ ಸಾವಿನ ಸಂಖ್ಯೆ ಕೂಡ ಕಡಿಮೆಯಾಗತ್ತಿದ್ದು, ಒಂದೇ ದಿನ 181 ಮಂದಿ ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,52,274ಕ್ಕೆ ಏರಿಕೆಯಾಗಿದೆ.