ಮಂಗಳೂರು-ತಿರುವನಂತಪುರಂ ರೈಲಿನಲ್ಲಿ ಬೆಂಕಿ, ಪ್ರಯಾಣಿಕರ ಎಚ್ಚರಿಕೆಯಿಂದ ತಪ್ಪಿದ ಅನಾಹುತ

 ಮಂಗಳೂರು-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಇಂದು(ಭಾನುವಾರ) ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ.

Published: 17th January 2021 11:02 AM  |   Last Updated: 17th January 2021 11:03 AM   |  A+A-


Posted By : Raghavendra Adiga
Source : ANI

ಮಂಗಳೂರು:  ಮಂಗಳೂರು-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಇಂದು(ಭಾನುವಾರ) ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ.

ಪ್ರಕರಣದಲ್ಲಿ ಈವರೆಗೆ ಯಾವ ಗಾಯದ ವರದಿಯಾಗಿಲ್ಲ  ಆದರೆ ಸರಕುಗಳಿದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ರೈಲು ತಿರುವನಂತಪುರದ ವರ್ಕಳ ತಲುಪಿದ ವೇಳೆ ಬೆಂಕಿಯನ್ನು ಗಮನಿಸಿದ ರೈಲಿನಲ್ಲಿದ್ದ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದು ರೈಲು ನಿಲ್ಲಿಸಿದ್ದಾರೆ. ಇದರಿಂದಾಗಿ ದೊಡ್ಡ ದುರಂತ ತಪ್ಪಿದಂತಾಗಿದೆ.

ಬೆಂಕಿ ಹಬ್ಬಿದ್ದ ಬೋಗಿಯನ್ನು ಇತರೆ ಬೋಗಿಗಳಿಂದ ಬೇರ್ಪಡಿಸಲಾಗಿದೆ. 

Image

ಬೆಂಕಿಯನ್ನು ನಂದಿಸಲು ಸ್ಥಳೀಯರು, ರೈಲು ಪ್ರಯಾಣಿಕರುಮತ್ತು ಅಗ್ನಿಶಾಮಕ ಸಿಬ್ಬಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸಿದ್ದಾರೆ. ತುಸು ವೇಳೆಯಲ್ಲೇ ಬೆಂಕಿ ನಂದಿರುವ ಬಗ್ಗೆ ಮಾಹಿತಿ ಬಂದಿದ್ದು ರೈಲಿನಲ್ಲಿರುವ ಎಲ್ಲಾ ಪ್ರಯಾಣಿಕರು ಸುರಕ್ಷಿತ ವಾಗಿದ್ದಾರೆ ಎಂದು ವರದಿಯಾಗಿದೆ.

 

 

Stay up to date on all the latest ರಾಷ್ಟ್ರೀಯ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp