ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಅಕ್ಷಯ್ ಕುಮಾರ್; 'ನೀವೂ ಭಾಗಿಗಳಾಗಿ': ಅಭಿಮಾನಿಗಳಿಗೆ ಕರೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿದ ನಂತರ ನಟ ಟ್ವಿಟ್ಟರ್ ಮೂಲಕ ದೇವಾಲಯ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ.
Published: 18th January 2021 09:32 AM | Last Updated: 18th January 2021 07:10 PM | A+A A-

ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿದ ನಂತರ ನಟ ಟ್ವಿಟ್ಟರ್ ಮೂಲಕ ದೇವಾಲಯ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಅಕ್ಷಯ್ ಕುಮಾರ್ ಮಂದಿರ ನಿರ್ಮಾಣಕ್ಕಾಗಿ ತಮ್ಮ ಪಾಲಿನ ದೇಣಿಗೆ ನೀಡಿದ್ದಾಗಿ ಬರೆದುಕೊಂಡಿದ್ದಾರೆ.
"ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವು ಪ್ರಾರಂಭವಾಗಿರುವುದು ಬಹಳ ಸಂತೋಷದ ಸಂಗತಿಯಾಗಿದೆ... ಈಗ ಇದು ನನ್ನ ಕೊಡುಗೆಯಾಗಿದೆ, ದೇಣಿಗೆ ನೀಡುವ ಮೂಲಕ ನಾನು ಈ ಕೆಲಸಕ್ಕಾಗಿ ಸಹಕಾರ ನೀಡಿದ್ದೇನೆ,ನೀವೂ ಈ ಕೆಲಸದಲ್ಲಿ ಭಾಗಿಗಳಾಗುತ್ತೀರಿಎಂದು ಭಾವಿಸುತ್ತೇವೆ. ಜೈ ಶ್ರೀರಾಮ್" ಎಂದು ನಟ ಬರೆದಿದ್ದಾರೆ .
ವೀಡಿಯೊದಲ್ಲಿ, 53 ವರ್ಷದ ನಟ ಜನರು ತಮಗೆ ಹಿತವಾದಷ್ಟು ಕೊಡುಗೆಯಾಗಿ ನೀಡಬೇಕು ಮತ್ತು "ಐತಿಹಾಸಿಕ, ಭವ್ಯವಾದ ದೇವಾಲಯ" ವನ್ನು ನಿರ್ಮಿಸುವ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಹೇಳಿದರು. "ನಾನು ಪ್ರಾರಂಭಿಸಿದೆ, ಈಗ ನೀವು ಸಹ ನನ್ನೊಂದಿಗೆ ಸೇರುತ್ತೀರಿ ಎಂದು ನನಗೆ ಖಾತ್ರಿಯಿದೆ. ಇದರಿಂದಾಗಿ ಮುಂಬರುವ ಪೀಳಿಗೆ ಭಗವಂತ ಶ್ರೀರಾಮನ ಜೀವನ, ಮಾರ್ಗ ಮತ್ತು ಸಂದೇಶವನ್ನು ಅನುಸರಿಸಲು ಸ್ಫೂರ್ತಿ ಪಡೆಯುತ್ತಾರೆ" ಅವರು ಹೇಳಿದರು.
बहुत खुशी की बात है कि अयोध्या में हमारे श्री राम के भव्य मंदिर का निर्माण शुरू हो चूका है...अब योगदान की बारी हमारी है l मैंने शुरुआत कर दी है, उम्मीद है आप भी साथ जुड़ेंगे l जय सियाराम pic.twitter.com/5SvzgfBVCf
— Akshay Kumar (@akshaykumar) January 17, 2021
2020 ರ ದೀಪಾವಳಿಯಂದು ಅಕ್ಷಯ್ ಕುಮಾರ್ ತಮ್ಮ ಹೊಸ ಚಿತ್ರ "ರಾಮ್ ಸೇತು"ವಿನ ಘೋಷಣೆ ಮಾಡಿದ್ದರು. ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರವು ರಾಮ ಸೇತುವಿನ ಕಥೆಯನ್ನು ನಿರೂಪಿಸುವ ಕಥಹಂದರವನ್ನು ಹೊಂದಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಅಕ್ಷಯ್ ಕುಮಾರ್ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ರಾಮ ಸೇತು ಕುರಿತು ಚರ್ಚಿಸಿದ್ದರು.