ಕೋವಿಡ್-19 ಎಫೆಕ್ಟ್: ಅಟಾರಿ ಗಡಿಯಲ್ಲಿ ಈ ವರ್ಷ ಜಂಟಿ ಅಥವಾ ಸಂಘಟಿತ ಪರೇಡ್ ಇಲ್ಲ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈ ವರ್ಷ ಗಣರಾಜ್ಯೋತ್ಸವದಂದು ಅಟಾರಿ ಗಡಿಯಲ್ಲಿ ಯಾವುದೇ ಜಂಟಿ ಅಥವಾ ಸಂಘಟಿತ ಪರೇಡ್ ಇರುವುದಿಲ್ಲ. ಪ್ರತಿವರ್ಷ ಗಣರಾಜ್ಯೋತ್ಸವದಂದು ಪಾಕಿಸ್ತಾನ ಮತ್ತು ಭಾರತೀಯ ಸೇನೆ ಜಂಟಿ ಪರೇಡ್ ನಡೆಸುತ್ತಿದ್ದವು.
Published: 18th January 2021 03:26 PM | Last Updated: 18th January 2021 03:26 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಈ ವರ್ಷ ಗಣರಾಜ್ಯೋತ್ಸವದಂದು ಅಟಾರಿ ಗಡಿಯಲ್ಲಿ ಯಾವುದೇ ಜಂಟಿ ಅಥವಾ ಸಂಘಟಿತ ಪರೇಡ್ ಇರುವುದಿಲ್ಲ. ಪ್ರತಿವರ್ಷ ಗಣರಾಜ್ಯೋತ್ಸವದಂದು ಪಾಕಿಸ್ತಾನ ಮತ್ತು ಭಾರತೀಯ ಸೇನೆ ಜಂಟಿ ಪರೇಡ್ ನಡೆಸುತ್ತಿದ್ದವು. ಇದು ಎರಡೂ ದೇಶಗಳ ಪ್ರೇಕ್ಷಕರು ಗಮನ ಸೆಳೆಯುತ್ತಿತ್ತು. ಆದರೆ ಈ ವರ್ಷ ಕೋವಿಡ್-19 ನಿರ್ಬಂಧಗಳಿಂದಾಗಿ ಅಟಾರಿ ಗಡಿಯಲ್ಲಿ ಯಾವುದೇ ಸಾರ್ವಜನಿಕರ ಪ್ರವೇಶ ಅನುಮತಿ ನೀಡಿಲ್ಲ.
"ಗಣರಾಜ್ಯೋತ್ಸವದಂದು ಅಟಾರಿ ಗಡಿಯಲ್ಲಿ ಈ ವರ್ಷ ಯಾವುದೇ ಜಂಟಿ ಅಥವಾ ಸಂಘಟಿತ ಪರೇಡ್ ಇಲ್ಲ. ಕೋವಿಡ್-19 ನಿರ್ಬಂಧಗಳಿಂದಾಗಿ ಸಾರ್ವಜನಿಕರಿಗೆ ಅನುಮತಿ ಇಲ್ಲ. ಭಾರತ ಗಡಿಯಲ್ಲಿ ದೈನಂದಿನ ವೇಳಾಪಟ್ಟಿಯಂತೆ ಧ್ವಜಾರೋಹಣ ನಡೆಸಲಿದೆ" ಎಂದು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್-19 ನಿರ್ಬಂಧಗಳಿಂದಾಗಿ ಮಾರ್ಚ್ 7 ರಿಂದ ಅಟಾರಿ ಗಡಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಈ ಮಧ್ಯೆ, ಗಣರಾಜ್ಯೋತ್ಸವದಂದು ಏನು ಮಾಡಬಹುದೆಂದು ನಿರ್ಧರಿಸಲು ಈ ವಾರ ಸಭೆ ಕರೆಯಲಾಗಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.