ಉತ್ತರ ಪ್ರದೇಶ: ಹೃದಯಾಘಾತದಿಂದ ವಾರ್ಡ್ ಬಾಯ್ ನಿಧನ, ಸಾವಿಗೆ ಲಸಿಕೆ ಕಾರಣವಲ್ಲ - ವೈದ್ಯರು
ಕೋವಿಡ್-19 ಲಸಿಕೆ ಪಡೆದ 24 ಗಂಟೆಗಳಲ್ಲೇ ಮೃತಪಟ್ಟ 46 ವರ್ಷದ ಆರೋಗ್ಯ ಕಾರ್ಯಕರ್ತನ ಸಾವಿಗೆ ಲಿಸಿಕೆ ಕಾರಣವಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸೋಮವಾರ ವೈದ್ಯರು ತಿಳಿಸಿದ್ದಾರೆ.
Published: 18th January 2021 06:12 PM | Last Updated: 18th January 2021 06:12 PM | A+A A-

ಕೋವಿಡ್ ಲಸಿಕೆಗಳು
ಲಖನೌ: ಕೋವಿಡ್-19 ಲಸಿಕೆ ಪಡೆದ 24 ಗಂಟೆಗಳಲ್ಲೇ ಮೃತಪಟ್ಟ 46 ವರ್ಷದ ಆರೋಗ್ಯ ಕಾರ್ಯಕರ್ತನ ಸಾವಿಗೆ ಲಿಸಿಕೆ ಕಾರಣವಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸೋಮವಾರ ವೈದ್ಯರು ತಿಳಿಸಿದ್ದಾರೆ.
ವಾರ್ಡ್ ಬಾಯ್ ಮಹಿಪಾಲ್ ಸಾವಿಗೆ ಲಸಿಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಮೃತ ಮಹಿಪಾಲ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮೂವರು ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಹ ಸಾವಿಗೆ ಹೃದಯಾಘಾತವೇ ಕಾರಣ ಎಂದು ಹೇಳಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಮಾಹಿತಿ) ನವನೀತ್ ಸೆಹಗಲ್ ಅವರು ಹೇಳಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ಮಿಲಿಂದ್ ಚಂದರ್ ಗರ್ಗ್ ಅವರು ಮರಣೋತ್ತರ ವರದಿಯನ್ನು ಉಲ್ಲೇಖಿಸಿ ಸಾವಿಗೆ ಹೃದಯ ಸಂಬಂಧಿ ಕಾಯಿಲೆ ಎಂದು ಹೇಳಿದ್ದಾರೆ. ವ್ಯಾಕ್ಸಿನೇಷನ್ ನಂತರ ಕೆಲವು ಉದ್ಯೋಗಿಗಳು ಜ್ವರದಿಂದ ಬಳಲುತ್ತಿದ್ದಾರೆ ಎಂದು. ಆದರೆ ಅದರಿಂದ ಇತರ ಯಾವುದೇ ಅಡ್ಡಪರಿಣಾಮಗಳಾಗಿರುವ ವರದಿಯಾಗಿಲ್ಲ ಎಂದರು.
ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನು ನಿರಾಕರಿಸಿದ ಮೃತನ ಕುಟುಂಬಸ್ಥರು ಮಹಿಪಾಲ್ ಎಂದಿಗೂ ಹೃದಯ ಸಂಬಂಧಿ ಸಮಸ್ಯೆಯನ್ನು ಎದುರಿಸಲಿಲ್ಲ. ಜ್ವರ ಮತ್ತು ಕೆಮ್ಮು ಹೊರತುಪಡಿಸಿ ಅವರು ಸಾಕಷ್ಟು ಆರೋಗ್ಯವಾಗಿದ್ದರು ಎಂದು ಹೇಳಿದ್ದಾರೆ.