ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚನೆ!
ಸೈಫ್ ಅಲಿಖಾನ್ ಅಭಿಯನದ ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚಿಸಿದ್ದಾರೆ. ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
Published: 18th January 2021 09:32 PM | Last Updated: 18th January 2021 10:02 PM | A+A A-

ತಾಂಡವ್ ಪೋಸ್ಟರ್
ಮುಂಬೈ: ಸೈಫ್ ಅಲಿಖಾನ್ ಅಭಿಯನದ ತಾಂಡವ್ ವೆಬ್ ಸಿರೀಸ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಕ್ಷಮೆಯಾಚಿಸಿದ್ದಾರೆ. ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದ ತಾಂಡವ್ ಚಿತ್ರದಲ್ಲಿ ಹಿಂದೂ ಧರ್ಮಿಯರ ಭಾವನೆಗಳಿಗೆ ಧಕ್ಕೆ ತರಲಾಗಿದ್ದು, ಇದು ಪ್ರದರ್ಶನ ಕಾಣದಂತೆ ನಿಷೇಧಿಸಬೇಕೆಂದು ಹಲವಾರು ನೆಟ್ಟಿಗರು ಒತ್ತಾಯಿಸಿದ್ದರು.
ವೆಬ್ ಸೀರಿಸ್ ವಿರುದ್ಧ ದಾಖಲಾದ ದೂರುಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇಂದು ಬೆಳಗ್ಗೆ ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ ಗೆ ನೋಟಿಸ್ ನೀಡಿತ್ತು.
ತಾಂಡವ್ ವೆಬ್ ಸಿರೀಸ್ ವಿರುದ್ದದ ಆರೋಪಗಳಿಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಸುಧೀರ್ಘ ಪತ್ರದೊಂದಿಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್, ವೀಕ್ಷಕರ ಪ್ರತಿಕ್ರಿಯೆಯನ್ನು ಹತ್ತಿರದಿಂದ ನೋಡುತ್ತಿದ್ದು, ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ, ಒಂದು ವೇಳೆ ಭಾವನೆಗಳಿಗೆ ಧಕ್ಕೆ ಯಾಗಿದ್ದರೆ ಕ್ಷಮೆಯಾಚಿಸುವುದಾಗಿ ಅವರು ಬರೆದುಕೊಂಡಿದ್ದಾರೆ.
Our sincere apologies . pic.twitter.com/Efr9s0kYnl
— ali abbas zafar (@aliabbaszafar) January 18, 2021