ಮೂರು ದಿನಕ್ಕೆ 3.80 ಲಕ್ಷ ಫಲಾನುಭವಿಗಳಿಗೆ ಕೊರೋನ ಲಸಿಕೆ
ಕೊರೋನ ಲಸಿಕಾ ಅಭಿಯಾನ ಬಹಳ ಯಶಸ್ವಿಯಾಗಿ ಸಾಗಿದ್ದು, ಸೋಮವಾರ ಸಂಜೆ ವರೆಗೆ ದೇಶದಲ್ಲಿ 1,48,266 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Published: 18th January 2021 11:16 PM | Last Updated: 18th January 2021 11:22 PM | A+A A-

ಕೋವಿಶೀಲ್ಡ್, ಕೋವಾಕ್ಸಿನ್
ನವದೆಹಲಿ: ಕೊರೋನ ಲಸಿಕಾ ಅಭಿಯಾನ ಬಹಳ ಯಶಸ್ವಿಯಾಗಿ ಸಾಗಿದ್ದು, ಸೋಮವಾರ ಸಂಜೆ ವರೆಗೆ ದೇಶದಲ್ಲಿ 1,48,266 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕಳದೆ ಶನಿವಾರ ದೇಶದ ಮೂರು ಸಾವಿರಕ್ಕೂ ಹೆಚ್ಚು ಲಸಿಕಾ ಕೇಂದ್ರಗಳ ಮೂಲಕ ಜಗತ್ತಿನ ಬೃಹತ್ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ.
ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನ ಆರಂಭವಾದಾಗಿನಿಂದ ಈವರೆಗೆ 3,ಲಕ್ಷದ 81,305 ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಇಲಾಖೆ ವರದಿ ಹೇಳಿದೆ. ಕೋವಿಡ್-19 ಲಸಿಕೆಯಿಂದ ಸಾವು ಸಂಭವಿಸುವುದಿಲ್ಲ, ಅಡ್ಡ ಪರಿಣಾಮ ಸಾಮಾನ್ಯವಾದದ್ದು ಎಂಬುದನ್ನು ಜನರಲ್ಲಿ ತಿಳಿಸಿ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ.
ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಂತಾರಾಷ್ಟ್ರೀಯ ಸಂಸ್ಥೆ ತಯಾರಿಸಿರುವ ಕೋವಾಕ್ಸಿನ್ ಲಸಿಕೆಗಳನ್ನು ತುರ್ತು ಔಷಧವಾಗಿ ಬಳಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇವೆರಡೂ ಲಸಿಕೆಗಳನ್ನು ಲಸಿಕಾ ವಿತರಣೆ ಕಾರ್ಯಕ್ರಮದಲ್ಲಿ ಬಳಕೆ ಮಾಡಲಾಗುತ್ತಿದೆ.