ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ: ಗಮನ ಸೆಳೆದ 'ಮಹಿಳಾ ರೈತರ ದಿನ'

ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಸೋಮವಾರ ವಿಭಿನ್ನವಾಗಿತ್ತು. ವೇದಿಕೆ ನಿರ್ವಹಣೆ, ಜನದಟ್ಟಣೆ ನಿಯಂತ್ರಣ, ದೇಣಿಗೆ ಸಂಗ್ರಹಣೆ ಮತ್ತಿತರ ಎಲ್ಲಾ ಜವಾಬ್ದಾರಿಗಳನ್ನು ಮಹಿಳೆಯರೇ ನಿರ್ವಹಿಸುವ ಮೂಲಕ ಮಹಿಳಾ ರೈತರ ದಿನವಾಗಿ ಗಮನ ಸೆಳೆಯಿತು.

Published: 18th January 2021 08:57 PM  |   Last Updated: 18th January 2021 09:00 PM   |  A+A-


Womens_during_protest1

ಪ್ರತಿಭಟನಾನಿರತ ಮಹಿಳೆಯರು

Posted By : Nagaraja AB
Source : The New Indian Express

ನವದೆಹಲಿ: ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಸೋಮವಾರ ವಿಭಿನ್ನವಾಗಿತ್ತು. ವೇದಿಕೆ ನಿರ್ವಹಣೆ, ಜನದಟ್ಟಣೆ ನಿಯಂತ್ರಣ, ದೇಣಿಗೆ ಸಂಗ್ರಹಣೆ ಮತ್ತಿತರ ಎಲ್ಲಾ ಜವಾಬ್ದಾರಿಗಳನ್ನು ಮಹಿಳೆಯರೇ ನಿರ್ವಹಿಸುವ ಮೂಲಕ ಮಹಿಳಾ ರೈತರ ದಿನವಾಗಿ ಗಮನ ಸೆಳೆಯಿತು.

ಹೋರಾಟದ ಪ್ರಮುಖ ಸ್ಥಳವಾದ ಸಿಂಗು ಗಡಿಯಲ್ಲಿ ಇದುವರೆಗೂ ಪುರುಷರು ನೋಡಿಕೊಳ್ಳುತ್ತಿದ್ದ ಸ್ವಯಂ ಸೇವಕರ ನಡುವೆ ಸಮನ್ವಯತೆ ಸಾಧಿಸುವುದು, ದಿನದ ನಡಾವಳಿಗಳನ್ನು ಖಾತ್ರಿಪಡಿಸುವುದು ಮತ್ತಿತರ ಕೆಲಸ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಸಿಂಗು ಗಡಿಯಲ್ಲಿ ಮಹಿಳೆಯರಿಂದಲೇ ವೇದಿಕೆ ಕಾರ್ಯಕ್ರಮ ನಿರ್ವಹಿಸಲಾಯಿತು. ಎಲ್ಲಾ ಭಾಷಣಕಾರರು ಮಹಿಳೆಯರೇ ಆಗಿದ್ದರು. ದೇಶದ ವಿವಿಧ ಕಡೆಗಳಲ್ಲಿ ರೈತ ಮಹಿಳೆಯರು ಧರಣಿ, ಸಭೆ ,ಮೆರವಣಿಗೆ ಆಯೋಜಿಸುವ ಮೂಲಕ ಈ ದಿನ ಗಮನ ಸೆಳೆಯಿತು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಕವಿತಾ ಕುರುಗಂತಿ ತಿಳಿಸಿದರು.

ಸ್ವಯಂ ಸೇವಕರ ನಡುವೆ ಸಮನ್ವಯತೆ ಸಾಧಿಸುವ ಜವಾಬ್ದಾರಿ ನಿರ್ವಹಿಸಿ, ವೃದ್ಧರಿಗೆ ನೆರವು ನೀಡಿದ್ದಾಗಿ ಸಿಂಗು ಗಡಿಯಲ್ಲಿನ ಪ್ರತಿಭಟನಾನಿರತ ಮಹಿಳೆಯೊಬ್ಬರು ಹೇಳಿದರು. ಸೋಮವಾರ ಹೋರಾಟವನ್ನು ಮಹಿಳಾ ಕಿಸಾನ್ ದಿನವಾಗಿ ಮಾಡಲು ಸಂಯುಕ್ತ ಕಿಸಾನ್ ಮೋರ್ಚ್ ಕರೆಗೆ ದೆಹಲಿಯಾದ್ಯಂತ ಅನೇಕ ಮಹಿಳಾ ಸಂಘಟನೆಗಳು ಬೆಂಬಲ ನೀಡಿದವು.

ಅವಶ್ಯಕ ವಸ್ತಗಳ ಬೆಲೆ ಏರಿಕೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಂಚನೆ ಮತ್ತಿತರ ಹಲವಾರು ಸಮಸ್ಯೆಗಳಿಂದ ಈಗಾಗಲೇ ನರಳುತ್ತಿರುವಾಗ ನೂತನ ಕೃಷಿ ಕಾನೂನುಗಳಿಂದ ಮತ್ತಷ್ಟು ಪರಿಸ್ಥಿತಿ ಹದಗೆಡಲಿದೆ ಎಂಬುದು ಮಹಿಳಾ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾರಿಗೂ ಮನವರಿಕೆಯಾಗಿದೆ ಎಂದು ಅಖಿಲ ಭಾರತ ಡೆಮಾಕ್ರಟಿಕ್ ಮಹಿಳೆಯರ ಅಸೋಸಿಯೇಷನ್ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp