ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕು ನಮಗಿದೆ: ಸುಪ್ರೀಂ ತೀರ್ಪಿನ ಬಳಿಕ ರೈತರ ಒಕ್ಕೂಟ
ಪ್ರತಿಭಟನಾ ನಿರತ ರೈತರು ದೆಹಲಿಗೆ ಪ್ರವೇಶಿಸುವ ಬಗ್ಗೆ ಮೊದಲು ನಿರ್ಧರಿಸಬೇಕಾದವರು ದೆಹಲಿ ಪೊಲೀಸರು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ರೈತ ಸಂಘಟನೆಗಳು ತಮಗೆ ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿವೆ.
Published: 18th January 2021 03:59 PM | Last Updated: 18th January 2021 04:05 PM | A+A A-

ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕು ನಮಗಿದೆ: ಸುಪ್ರೀಂ ತೀರ್ಪಿನ ಬಳಿಕ ರೈತರ ಒಕ್ಕೂಟ
ನವದೆಹಲಿ: ಪ್ರತಿಭಟನಾ ನಿರತ ರೈತರು ದೆಹಲಿಗೆ ಪ್ರವೇಶಿಸುವ ಬಗ್ಗೆ ಮೊದಲು ನಿರ್ಧರಿಸಬೇಕಾದವರು ದೆಹಲಿ ಪೊಲೀಸರು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ರೈತ ಸಂಘಟನೆಗಳು ತಮಗೆ ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿವೆ.
ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪಂಜಾಬ್ ನ ಪ್ರಧಾನ ಕಾರ್ಯದರ್ಸಿ ಪರಮ್ಜೀತ್ ಸಿಂಗ್ ಈ ಬಗ್ಗೆ ಮಾತ್ನಾಡಿದ್ದು, ರೈತರು ರಾಜ್ ಪಥ್ ಅಥವಾ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಲ್ಲಿ ರ್ಯಾಲಿ ನಡೆಸಲು ಹೊರಟಿಲ್ಲ, ದೆಹಲಿಯ ಹೊರ ವರ್ತುಲ ರಸ್ತೆಯಲ್ಲಿ ಮಾತ್ರ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ, ಆದ್ದರಿಂದ ಅಧಿಕೃತ ರಿಪಬ್ಲಿಕ್ ಡೇ ಪರೇಡ್ ಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.
ನಾವು ದೆಹಲಿ ಗಡಿಯಲ್ಲಿ ಸಿಲುಕಿಕೊಂಡಿದ್ದೇವೆ, ನಾವು ಗಡಿಯಲ್ಲಿ ಕೂರಲು ಸ್ವತಃ ನಿರ್ಧರಿಸಿದ್ದಲ್ಲ. ದೆಹಲಿ ಪ್ರವೇಶಿಸುವುದರಿಂದ ನಮ್ಮನ್ನು ತಡೆಯಲಾಗಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನಾವು ರ್ಯಾಲಿ ನಡೆಸುತ್ತೇವೆ, ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ ಖಂಡಿತವಾಗಿಯೂ ನಾವು ದೆಹಲಿ ಪ್ರವೇಶಿಸುತ್ತೇವೆ ಎಂದು ಸಿಂಗ್ ತಿಳಿಸಿದ್ದಾರೆ.
ಮತ್ತೋರ್ವ ರೈತ, ಪಂಜಾಬ್ ನ ಅಖಿಲ ಭಾರತೀಯ ಕಿಸಾನ್ ಸಭದ ಉಪಾಧ್ಯಕ್ಷ ಲಖ್ಬೀರ್ ಸಿಂಗ್ ಮಾತನಾಡಿದ್ದು, ಜ.26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ನಂತರ ರೈತರು ವಾಪಸ್ ಹೊರ ವರ್ತುಲ ರಸ್ತೆಗೆ ಬರಲಿದ್ದಾರೆ. ಸರ್ಕಾರಿ ಉಪಸ್ಥಿತಿ ಇರುವ ಜಾಗಗಳಿಗೆ ನಾವು ಹೋಗುವುದಿಲ್ಲ ಎಂದು ಲಖ್ಬೀರ್ ಸಿಂಗ್ ಹೇಳಿದ್ದಾರೆ.
ಒಂದು ವೇಳೆ ದೆಹಲಿ ಪೊಲೀಸರು ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡದೇ ಇದ್ದಲ್ಲಿ ರೈತರ ನಿಲುವು ಏನಾಗಿರಲಿದೆ ಎಂಬ ಪ್ರಶ್ನೆಗೆ ರೈತ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ದೆಹಲಿ ಪ್ರವೇಶಿಸಿ ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಕ್ಕೆ ನಮಗೆ ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಇದ್ದಲ್ಲಿ, ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲು ರೈತರ ಸಮಿತಿ ಅದರ ಬಗ್ಗೆ ನಿರ್ಧರಿಸಲಿದೆ. ಆದರೆ 26 ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಯುವುದು ಖಚಿತ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.