ಕೋವಿಡ್ ಲಸಿಕೆ ಹಾಕಿಸಿಕೊಂಡ 580 ಮಂದಿಯಲ್ಲಿ ಅಡ್ಡ ಪರಿಣಾಮ, ಇಬ್ಬರು ಸಾವು; ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದ ಕೇಂದ್ರ

ದೇಶಾದ್ಯಂತ ಸತತ ಮೂರನೇ ದಿನ ಕೋವಿಡ್ ಲಸಿಕಾ ವಿತರಣೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನದ ಹೊತ್ತಿಗೆ ದೇಶಾದ್ಯಂತ ಲಸಿಕೆ ಪಡೆದವರ ಸಂಖ್ಯೆ  3,81,305 ಮಂದಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Published: 19th January 2021 08:22 AM  |   Last Updated: 19th January 2021 12:42 PM   |  A+A-


COVID-19 vaccine

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ದೇಶಾದ್ಯಂತ ಸತತ ಮೂರನೇ ದಿನ ಕೋವಿಡ್ ಲಸಿಕಾ ವಿತರಣೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನದ ಹೊತ್ತಿಗೆ ದೇಶಾದ್ಯಂತ ಲಸಿಕೆ ಪಡೆದವರ ಸಂಖ್ಯೆ  3,81,305 ಮಂದಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಲಸಿಕೆ ಪಡೆದವರ ಪೈಕಿ 580 ಮಂದಿಯಲ್ಲಿ ಅಲ್ಪ ಪ್ರಮಾಣದ ಅಡ್ಡ ಪರಿಣಾಮಗಳು ಗೋಚರವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಈ ಇಬ್ಬರ ಸಾವಿಗೂ ಲಸಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಅವರು, 'ಸೋಮವಾರ ಒಂದೇ ದಿನ ಸಂಜೆ 5 ಗಂಟೆಯವರೆಗೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,48,266 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಅಂದಾಜು ಲೆಕ್ಕಾಚಾರದ ಪ್ರಕಾರ 3,81,305 ಫಲಾನುಭವಿಗಳಿಗೆ ಇದುವರೆಗೆ ಲಸಿಕೆ ನೀಡಲಾಗಿದೆ. ಸೋಮವಾರ ಲಸಿಕೆ ಪಡೆದ 1,48,266 ಜನರಲ್ಲಿ, 36,888 ಮಂದಿ ಕರ್ನಾಟಕದವರು. ಇನ್ನು ಬಿಹಾರದಲ್ಲಿ-8,656, ಅಸ್ಸಾಂ- 1,822, ಕೇರಳ-7,070, ಮಧ್ಯಪ್ರದೇಶ-6,665, ತಮಿಳುನಾಡು-7,628, ತೆಲಂಗಾಣ-10,352, ಪಶ್ಚಿಮ ಬಂಗಾಳ-11,58, ದೆಹಲಿ-3,111 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತೆಯೇ ಜನವರಿ 16ರಂದು ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ನಂತರ, ಲಸಿಕೆ ಪಡೆದ 580 ಮಂದಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡಿವೆ. ಈ ಪೈಕಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಏಳು ಮಂದಿಯ ಪೈಕಿ ಇಬ್ಬರು ಕರ್ನಾಟಕದವರು. ಒಬ್ಬರು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬರು ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉತ್ತರ ಪ್ರದೇಶದ ಮೊರಾಬಾದ್‌ನಲ್ಲಿ ಮತ್ತು ಕರ್ನಾಟಕದ ಬಳ್ಳಾರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅದರೆ ಅವರ ಸಾವಿಗೆ ಲಸಿಕೆ ಕಾರಣವಲ್ಲ. ಲಸಿಕೆ ನಂತರ ಗಂಭೀರಗೊಂಡ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp